ಮಡಿಕೇರಿ: ಕೊರೊನಾ ನಿಯಂತ್ರಿಸಲು ಸರ್ಕಾರ ಕಳೆದ 40 ದಿನಗಳಿಂದ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಇಂದು ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದೇ ತಡ ಜನರು ಮದ್ಯದಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ಖರೀದಿಸಿದ್ದಾರೆ. ಅಲ್ಲದೆ ಕುಡಿದು ರಂಪಾಟ ಸಹ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿಯ ಯುವತಿ ಎಣ್ಣೆ ಕುಡಿದಿದ್ದಾಳೆ. ಕಿಕ್ ಏರುತ್ತಿದ್ದಂತೆ ರಸ್ತೆಯಲ್ಲೆಲ್ಲಾ ರಂಪಾಟ ಮಾಡಿ ಸಿಕ್ಕ ಸಿಕ್ಕವರಿಗೆಲ್ಲ ಕಲ್ಲಿನಿಂದ ಹೊಡೆಯಲು ಯತ್ನಿಸಿದ್ದಾಳೆ. ಆಕೆಯ ಕಲ್ಲೇಟಿನಿಂದ ತಪ್ಪಿಸಿಕೊಳ್ಳುವುದರಲ್ಲೇ ಸಾರ್ವಜನಿಕರು ಸುಸ್ತಾಗಿ ಹೋದರು.
ಎಣ್ಣೆ ಕಿಕ್‍ನಲ್ಲಿ ಯುವತಿ ಫುಲ್ ತೂರಾಡಿದ್ದು, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಜೊತೆಯಲ್ಲಿದ್ದ ಪಕ್ಕದ ಮನೆಯವರು ಯುವತಿ ರಂಪಾಟವನ್ನು ನಿಲ್ಲಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಯುವತಿ ತನ್ನ ಲೋಕದಲ್ಲೇ ಇದ್ದಳು, ಯಾವುದಕ್ಕೂ ಜಗ್ಗದೇ ತೂರಾಡುತ್ತ ಕಲ್ಲಿನಿಂದ ಹೊಡೆಯುತ್ತಿದ್ದಳು. ಪದೇ ಪದೇ ತಪ್ಪಿಸಿಕೊಂಡು ರಸ್ತೆಯಲ್ಲೆಲ್ಲ ರಂಪಾಟ ಮಾಡಿದ್ದಾಳೆ. ಇದರಿಂದ ದಾರಿಹೋಕರು ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು.