ರಾಯಚೂರು: ತಾಯಿಗೆ ವಿಡಿಯೋ ಕಾಲ್ ಮಾಡಿ ಮೈಸೂರಿನಿಂದ ಮಗುವಿನೊಂದಿಗೆ ಪರಾರಿಯಾಗಿದ್ದ ಗೃಹಿಣಿಯ ಫೇಸ್ ಬುಕ್ ಗೆಳೆಯನಿಗೆ ಇದೀಗ ಕಾನೂನು ಭಯ ಶುರುವಾಗಿದೆ.
ಹೌದು. ತನ್ನ ಪತಿ ಹಾಗೂ ಪತಿ ಮನೆಯವ ಕಿರುಕುಳ ತಾಳಲಾರದೆ ಹೊರಬಂದ ಮೈಸೂರು ಮೂಲದ ನಿಖಿತಾ ತನ್ನ ಫೆಸ್ ಬುಕ್ ಗೆಳೆಯನ ಮೂಲಕ ಆಶ್ರಮ ಸೇರಲು ರಾಯಚೂರಿಗೆ ಬಂದಿದ್ದರು. ಅಂತೆಯೇ ಸಹಾಯ ಮಾಡಿದ್ದ ಗೆಳೆಯ ಶಶಿಕಾಂತ್ ಇದೀಗ ಆತಂಕದಲ್ಲಿದ್ದಾರೆ.
Advertisement
ಇದನ್ನೂ ಓದಿ: ತಾಯಿಗೆ ವಿಡಿಯೋ ಕಾಲ್ ಮಾಡಿ ನಾಪತ್ತೆಯಾಗಿದ್ದ ಗೃಹಿಣಿ ರಾಯಚೂರಿನಲ್ಲಿ ಪತ್ತೆ- ಪ್ರಕರಣಕ್ಕೆ ರೋಚಕ ಟ್ವಿಸ್ಟ್
Advertisement
ರಾಯಚೂರಿನಿಂದ ನಿಖಿತಾಳ ಜೊತೆ ಶಶಿಕಾಂತ್ ಅವರನ್ನು ಕರೆದೊಯ್ದ ಮೈಸೂರಿನ ವಿಜಯನಗರ ಠಾಣೆ ಪೊಲೀಸರು, ಎರಡು ದಿನ ವಿಚಾರಣೆಗೊಳಪಡಿಸಿ ಬಿಟ್ಟಿದ್ದಾರೆ. ಇನ್ನು ನಿಖಿತಾಳನ್ನ ಆಕೆಯ ತಾಯಿ ಮನೆಗೆ ಬಿಟ್ಟಿದ್ದಾರೆ. ಆದ್ರೆ ತಂದೆಯ ಕಿರುಕುಳ ಇರುವುದರಿಂದ ತಾಯಿ ಹತ್ತಿರ ಬಿಟ್ಟರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿಖಿತಾ ಅವರು ಶಶಿಕಾಂತ್ ಬಳಿ ಹೇಳಿದ್ದರು.
Advertisement
ಈಗ ನಿಖಿತಾ ಹೆಚ್ಚು ಕಡಿಮೆ ಮಾಡಿಕೊಂಡರೆ ನಾನು ಜವಾಬ್ದಾರನಲ್ಲ ನನ್ನದೇನು ತಪ್ಪಿಲ್ಲ. ಕಷ್ಟದಲ್ಲಿದ್ದಾಳೆ ಅಂತ ಸ್ನೇಹಿತೆ ಗೆ ಸಹಾಯ ಮಾಡಲು ಮುಂದಾಗಿರುವುದು ತಪ್ಪಾಗಿದೆ ಅಂತ ಶಶಿಕಾಂತ ಅಲವತ್ತುಕೊಳ್ಳುತ್ತಿದ್ದಾರೆ. ಈ ಕುರಿತು ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ತನ್ನ ಹೇಳಿಕೆ ನೀಡಲು ಮುಂದಾಗಿದ್ದಾರೆ.
Advertisement
ಇದನ್ನೂ ಓದಿ: `ದಯವಿಟ್ಟು ಹುಡ್ಕೋ ಪ್ರಯತ್ನ ಮಾಡ್ಬೇಡಿ ಮಮ್ಮಿ’- ವಿಡಿಯೋ ಕಾಲ್ ಮಾಡಿ ಮಗುವಿನೊಂದಿಗೆ ಗೃಹಿಣಿ ನಾಪತ್ತೆ!
https://www.youtube.com/watch?v=-CQL0kx4Nlc