ಭೋಪಾಲ್: 5 ಮದ್ವೆಯಾಗಿದ್ದ ವ್ಯಕ್ತಿಯೊಬ್ಬನನ್ನ ಆತನ 5ನೇ ಹೆಂಡತಿಯೇ ಕೊಡಲಿಯಿಂದ ಕೊಚ್ಚಿ ಕೊಂದು, ಬಳಿಕ ಮರ್ಮಾಂಗ ಕತ್ತರಿಸಿ ಎಸೆದಿರುವ ಘಟನೆ ಮಧ್ಯಪ್ರದೇಶದ (Madhya Pradesh) ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬಿರೇಂದರ್ ಗುರ್ಜರ್ ಎಂದು ಗುರುತಿಸಲಾಗಿದೆ. 5 ಮದುವೆಯಾಗಿದ್ದ (Marriage) ಈತನನ್ನು 5ನೇ ಪತ್ನಿ ಕಾಂಚನಾ ಗುರ್ಜರ್ ಕೊಡಲಿಯಿಂದ ಕೊಚ್ಚಿ ಹಲ್ಲೆ ಮಾಡಿದ್ದಲ್ಲದೇ, ಮೃತದೇಹ ಎಸೆಯುವ ಮುನ್ನ ಮರ್ಮಾಂಗ ಕತ್ತರಿಸಿದ್ದಾಳೆ. ಈ ಘಟನೆ ಸಿಂಗ್ರೌಲಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಇದನ್ನೂ ಓದಿ: `ಪುಷ್ಪ 2′ ಬಳಿಕ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು? ಇಲ್ಲಿದೆ ಅಪ್‌ಡೇಟ್
ಕೊಲೆಯಾದ ಬಿರೇಂದ್ರ ಗುರ್ಜರ್ ಶವ ಫೆಬ್ರವರಿ 21ರಂದು ಪತ್ತೆಯಾಗಿದ್ದು, ಈ ವೇಳೆ ಆತನ ಮರ್ಮಾಂಗ ಹಾಗೂ ಕುತ್ತಿಗೆಯಲ್ಲಿ ಗಾಯಗಳಿದ್ದವು. ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಇತ್ತ ಮೃತ ಬಿರೇಂದರ್ ಪತ್ನಿ ಕಾಂಚನಾ ಗುರ್ಜರ್ ತನ್ನ ಗಂಡನ ಹತ್ಯೆ ಕುರಿತಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಳು ಎಂದು ಕೊತ್ವಾಲಿ ಪೊಲೀಸ್ (Kotwali Police) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರನ್ನು ಭೇಟಿಯಾದ ಕಾನ್ರಾಡ್ ಸಂಗ್ಮಾ – ಮೇಘಾಲಯದಲ್ಲಿ ಸರ್ಕಾರ ರಚನೆಗೆ ಮನವಿ
ಇದಾದ ಬಳಿಕ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಮೃತ ವ್ಯಕ್ತಿಯ ಸಂಬಂಧಿಗಳು ಸ್ನೇಹಿತರು ಸೇರಿದಂತೆ ಎಲ್ಲರನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದರು. ಈ ತನಿಖೆ ವೇಳೆ ಮೃತನ ಪತ್ನಿಯನ್ನು ಕೂಡ ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಬಳಿಕ ಸತ್ಯ ಬಾಯ್ಬಿಟ್ಟ ಮಹಿಳೆ, ತನ್ನ ಗಂಡ ಮಾದಕ ವ್ಯಸನಿಯಾಗಿದ್ದ, ದಿನವೂ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಹೀಗಾಗಿ ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾಳೆ.
ತಪ್ಪಿಸಿಕೊಳ್ಳೋಕೆ ಮಾಸ್ಟರ್ ಪ್ಲಾನ್: ಫೆಬ್ರವರಿ 21 ರಂದು ರಾತ್ರಿ ಕೊಲೆಗೂ ಮೊದಲು ಕಾಂಚನಾ 20 ನಿದ್ರೆ ಮಾತ್ರೆಯನ್ನು ಗಂಡನಿಗೆ ಕೊಡುವ ಆಹಾರದಲ್ಲಿ ಬೆರೆಸಿದ್ದಳು. ಗಂಡ ಊಟ ಮಾಡಿ ಪ್ರಜ್ಞೆ ತಪ್ಪಿದ ಬಳಿಕ ಕೊಡಲಿಯಿಂದ ಹಲ್ಲೆ ನಡೆಸಿದ್ದಾಳೆ. ನಂತರ ಅವನ ಮರ್ಮಾಂಗ ಕತ್ತರಿಸಿ, ಮೃತದೇಹವನ್ನು ಬಟ್ಟೆಯಿಂದ ಸುತ್ತಿ ಎಸೆದಿದ್ದಾಳೆ. ಸಾಕ್ಷ್ಯ ನಾಶ ಮಾಡುವ ಸಲುವಾಗಿ ಕೊಲೆಯಾದ ಗಂಡನ ಬಟ್ಟೆ, ಚಪ್ಪಲಿಗಳನ್ನ ಸುಟ್ಟುಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಬಿರೇಂದರ್‌ಗೆ ಇದು 5ನೇ ಮದುವೆಯಾಗಿತ್ತು. ಈತನ ಕಿರುಕುಳದಿಂದಾಗಿ ವಿವಾಹವಾದ ಎಲ್ಲಾ ಪತ್ನಿಯರು ಈತನನ್ನು ಬಿಟ್ಟು ಹೋಗಿದ್ದರು.