ಹೈದರಾಬಾದ್: ಸನಾತ್ ನಗರ ಪೊಲೀಸರು 43 ವರ್ಷ ವಯಸ್ಸಿನ ಚಾಲಕ ಮೊಹದ್ ಖಜಾ ಅವರ ಅನುಮಾನಾಸ್ಪದ ಸಾವಿನ ನಿಗೂಢತೆಯನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ತನ್ನ ಪತಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೊನೆಗೂ ಸಾವಿನ ನಿಗೂಢ ರಹಸ್ಯವನ್ನು ಬಯಲು ಮಾಡಿದ್ದಾರೆ.
Advertisement
Advertisement
ಅಪರಿಚಿತ ಶವ ಪತ್ತೆ: ಈ ಮೊದಲು ಫೆಬ್ರವರಿ 21 ಪೊಲೀಸರಿಗೆ ಅಪರಿಚಿತ ಶವವೊಂದು ರೈಲ್ವೇ ಹಳಿಯಲ್ಲಿ ಪತ್ತೆಯಾಗಿರುವ ಮಾಹಿತಿ ಇತ್ತು. ಪತ್ತೆಯಾದ ಮೃತ ದೇಹದ ಮೇಲೆ ಆಗಿದ್ದ ಗಾಯಗಳನ್ನು ಪರಿಶೀಲಿಸಿದ ನಂತರ ರೈಲಿನ ಅಪಘಾತದಲ್ಲಿ ಸಾಯಲಿಲ್ಲವೆಂದು ಪೊಲೀಸರು ಶಂಕಿಸಿದ್ದರು. ರೈಲ್ವೇ ಹಳಿಯ ಕೆಲವು ಮೀಟರ್ ದೂರದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಬಳಿಕ ರೈಲಿನ ಹಳಿಯ ಮೇಲೆ ತಂದು ಎಸೆಯಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.
Advertisement
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇತ್ತ ಒಂದು ವಾರದ ನಂತರ ಎಸ್.ಆರ್ ನಗರ್ ಪೊಲೀಸ್ ಠಾಣೆಯಲ್ಲಿ ಸಲ್ಹಾ ಮಹಿಳೆ ನಾಪತ್ತೆ ದೂರನ್ನು ನೀಡಿದ್ದಾರೆ. ಹೀಗಾಗಿ ಪೊಲೀಸರು ಪತ್ತೆಯಾಗಿದ್ದ ದೇಹವನ್ನು ಖಜಾ ಎಂದು ಗುರುತಿಸಿದ್ದಾರೆ.
Advertisement
ಮೃತ ದೇಹ ಪತ್ತೆಯಾದ ಸ್ಥಳದಲ್ಲಿ ಬಂಡೆಯ ಮೇಲೆ ಮತ್ತು ಟ್ರ್ಯಾಕ್ ಗಳ ಮೇಲೆ ಇದ್ದ ರಕ್ತದ ಕಲೆಗಳನ್ನು ಪರಿಶೀಲಿಸಿ ನಂತರ ಈ ಪ್ರಕರಣವನ್ನು ಸನಾತ್ ನಗರ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಸನತ್ ನಗರ ಪೊಲೀಸರು ವಿಚಾರಣೆ ಆರಂಭಿಸಿ ನಗರದ ವಿವಿಧ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಆಗ ಖಾಜಾ ಇತರರೊಂದಿಗೆ ಮದ್ಯ ಸೇವಿಸುತ್ತಿದ್ದುದ್ದು ವಿಡಿಯೋದಲ್ಲಿ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಖಾಜಾ ಜೊತೆ ಇದ್ದವರನ್ನು ಗುರುತಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೊಲೆ ಬೆಳಕಿಗೆ ಬಂದಿದ್ದು ಹೇಗೆ: ವಿಚಾರಣೆಯಲ್ಲಿ ಹತ್ಯೆಯ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಖಾಜಾ ಅವರ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದಿತ್ತು. ಗೀಗಾಗಿ ಆತ ಪತ್ನಿ ಸಂಬಧ ಬೆಳೆಸಿದ್ದ ಮೊಹದ್ ತಬ್ರೇಜ್ ಖುರೇಷಿಯಿಂದ ದೂರವಿರುವಂತೆ ಎಚ್ಚರಿಸಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಅವನನ್ನು ಕೊಲ್ಲಲು ಪ್ಲಾನ್ ಮಾಡಿದ್ದಾಳೆ. ಪತಿಯನ್ನು ಕೊಲ್ಲಲು ತಬ್ರೇಜ್ ಅವರು ಸಯ್ಯದ್ ಮುಜೀಬ್ ಸ್ನೇಹಿತರನ್ನು ಸಂಪರ್ಕಿಸಿ 2 ಲಕ್ಷ ರೂ. ಸುಪಾರಿ ಕೊಟ್ಟಿದ್ದಾಳೆ. ನಂತರ ಅವರು ಅಕ್ಬರ್ ಬೈಗ್, ಅಯಾಜ್ ಮತ್ತು ಶೇಕ್ ಜಹೀರ್ ಎಂಬವರಿಗೆ ಸುಪಾರಿ ಕೊಟ್ಟಿದ್ದಾರೆ.
ಫೆಬ್ರವರಿ 20 ರಂದು ಖಜಾ ಮತ್ತು ಮುಜೀಬ್ ಹೆಚ್ಚು ಮದ್ಯ ಖರೀದಿಸಿ ಬೊರಾಬಂಡಾದಲ್ಲಿ ರೈಲ್ವೆ ಟ್ರ್ಯಾಕ್ ಬಳಿ ಬಂದಿದ್ದಾರೆ. ಅಲ್ಲಿ ಅಯಾಜ್, ಅಕ್ಬರ್ ಮತ್ತು ಜಹೀರ್ ಇವರ ಜೊತೆ ಸೇರಿಕೊಂಡಿದ್ದಾರೆ. ಬಳಿಕ ಎಲ್ಲರೂ ಒಟ್ಟಾಗಿ ಸೇರಿದ್ದು, ಖಾಜಾ ಅತಿಯಾಗಿ ಕುಡಿದಿದ್ದಾನೆ. ಆಗ ಮುಜೀಬ್ ಮತ್ತು ಆಯಾಜ್ ಖಜಾರನ್ನು ತಳ್ಳಿ ಅವನ ತಲೆಯನ್ನು ಬಂಡೆಗಳ ಮೂಲಕ ಹೊಡೆದಿದ್ದಾರೆ. ನಂತರ ಅವರು ದೇಹವನ್ನು ರೈಲ್ವೇ ಟ್ರ್ಯಾಕ್ ಬಳಿ ಎಸೆದು ಸ್ಥಳದಿಂದ ಪರಾರಿಯಾಗಿರುವುದಾಗಿ ಅವರು ಬಾಯ್ಬಿಟ್ಟಿದ್ದಾರೆ.
ಇದೀಗ ಮಹಿಳೆಯ ದೂರಿನ ನೀಡಿದ ಬಳಿಕ ತನಿಖೆ ಮುಂದುವರಿಸಿದ ಪೊಲಿಸರಿಗೆ, ಮೃತ ವ್ಯಕ್ತಿಯ ಪತ್ನಿಯೇ ಕ್ರೂರವಾಗಿ ಕೊಲೆ ಮಾಡಿದ್ದಾಳೆ ಅನ್ನೋದು ಸ್ಪಷ್ಟವಾಗಿದೆ. ಹೀಗಾಗಿ ಖಜಾ ಪತ್ನಿ ಸಲ್ಹಾ ಬೇಗಮ್ ಜೊತೆ ಮೊಹದ್ ತಬ್ರೇಜ್ ಖುರೇಷಿ ಮತ್ತು ಇತರು ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.