ಹೈದರಾಬಾದ್: ಪತ್ನಿಯೊಬ್ಬಳು ತನ್ನ ಆಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಹರಿಪ್ರಸಾದ್ ಕೊಲೆಯಾದ ದುರ್ದೈವಿ. ಪತಿಯನ್ನೇ ಕೊಲೆ ಮಾಡಿದ ಮಹಿಳೆ ಹೆಸರು ಹಿಮಚಂದು. ಕಳೆದ ಎಂಟು ವರ್ಷಗಳ ಹಿಂದೆ ಇಬ್ಬರಿಗೂ ವಿವಾಹವಾಗಿತ್ತು. ದಂಪತಿಗೆ ಮೂರು ಹೆಣ್ಣು ಮಕ್ಕಳು ಇದ್ದಾರೆ.
ಏನಿದು ಘಟನೆ: ಹಿಮಚಂದು ಜನಿಸಿದ ಬಳಿಕ ಆಕೆಯ ತಾಯಿ ಮೃತ ಪಟ್ಟಿದ್ದರು. ಇದರಿಂದ ಹಿಮಚಂದು ತಂದೆ ಎರಡನೇ ವಿವಾಹವಾಗಿದ್ದರು. ಹಿಮಚಂದು ಅವರ ಚಿಕ್ಕಮ್ಮನಿಗೆ ಒಂದು ಗಂಡು ಮಗು ಜನಿಸಿತ್ತು. ಕೆಲ ವರ್ಷಗಳ ನಂತರ ಹಿಮಚಂದುಳನ್ನು ಹರಿಪ್ರಸಾದ್ ಎಂಬವರ ಜೊತೆ ಮದುವೆ ಮಾಡಲಾಗಿತ್ತು.
ಹರಿಪ್ರಸಾದ್ ಮೂಲತಃ ಕಾಕಿನಾಡ ಜಿಲ್ಲೆಯ ರಮಣಯ್ಯ ನಗರದಲ್ಲಿ ಕಾರು ಚಾಲಕರಾಗಿ ಜೀವನ ನಡೆಸುತ್ತಿದ್ದರು. ಮದುವೆ ನಂತರ ಇಬ್ಬರ ನಡುವಿನ ಜೀವನ ಉತ್ತಮವಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ತನ್ನ ತಂದೆಯ ಮಗ, ಅಂದರೆ ತಮ್ಮ ಭಾನುಪ್ರಸಾದ್, ಹಿಮಚಂದ್ರ ನಡುವೆ ಆಕ್ರಮ ಸಂಬಂಧ ಉಂಟಾಗಿತ್ತು. ಇದನ್ನು ತಿಳಿದ ಹರಿಪ್ರಸಾದ್ ಪತ್ನಿಗೆ ಎಚ್ಚರಿಕೆ ನೀಡಿದ್ದರು. ಆದರೆ ತನ್ನ ಆಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿ ವಿರುದ್ಧ ಕೋಪಗೊಂಡ ಆಕೆ ಭಾನುಪ್ರಸಾದ್ ಜೊತೆ ಸೇರಿ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.
ಪತಿಯನ್ನು ಕೊಲೆ ಮಾಡಿದ ನಂತರ ಭಾನುಪ್ರಸಾದ್ ಹಾಗೂ ಆತನ ಸ್ನೇಹಿತರ ಜೊತೆ ಸೇರಿ ಮೃತದೇಹವನ್ನು ನಗರದ ಹೊರವಲಯದ ಕಸ ವಿಲೇವಾರಿ ಸ್ಥಳದಲ್ಲಿ ಹಾಕಿ ಬೆಂಕಿ ಹಚ್ಚಿ ಸುಟ್ಟುಹಾಕಿದ್ದರು.
ಹರಿಪ್ರಸಾದ್ ಮೊಬೈಲ್ ಇದ್ದಕ್ಕಿದ್ದ ಹಾಗೇ ಸ್ವಿಚ್ ಆಫ್ ಆಗಿದ್ದನ್ನು ಗಮನಿಸಿದ ಆತನ ಸಹೋದರ ಹಿಮಚಂದುಳ ಬಳಿ ವಿಚಾರಿಸಿದ್ದಾರೆ. ಆದರೆ ತನ್ನ ಆತ್ತಿಗೆ ಇಂದ ಸರಿಯಾದ ಉತ್ತರ ಲಭಿಸಿದ ಕಾರಣ ಆತ ಸ್ಥಳೀಯ ಪೊಲೀಸರಿಗೆ ಹರಿಪ್ರಸಾದ್ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ನಗರದ ಹೊರವಲಯದಲ್ಲಿ ಅರ್ಧ ಸುಟ್ಟು ಹೋಗಿದ್ದ ಮೃತದೇಹ ಹರಿಪ್ರಸಾದ್ ಅವರದ್ದೇ ಎಂದು ಗುರುತಿಸಿದ್ದರು. ನಂತರದ ವಿಚಾರಣೆಯಲ್ಲಿ ಹರಿಪ್ರಸಾದ್ ಪತ್ನಿ ಹಿಮಚಂದ್ರ ಹಾಗೂ ಭಾನುಪ್ರಸಾದ್ ಕೊಲೆ ಆರೋಪಿಗಳು ಎಂದು ತಿಳಿದುಬಂದಿತ್ತು. ಪ್ರಸ್ತುತ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಕೊಲೆ ಮಾಡಲು ಸಹಕಾರ ನೀಡಿದ್ದ ಭಾನುಪ್ರಸಾದ್ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದಿದ್ದಾರೆ.