ಬೆಂಗಳೂರು: ಕೆ.ಆರ್ ನಗರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ (Bhavani Revanna) ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿಕೆಯಾಗಿದೆ.
ಕಿಡ್ನಾಪ್ ಪ್ರಕರಣದಲ್ಲಿ ಹೆಚ್‍ಡಿ ರೇವಣ್ಣ ಬಳಿಕ ಭವಾನಿ ರೇವಣ್ಣಗೂ ಸಂಕಷ್ಟ ಎದುರಾಗಿದೆ. ಸಂತ್ರಸ್ತೆಯ ಮಗ ಕೊಟ್ಟ ದೂರಿನಲ್ಲಿ ಭವಾನಿ ಹೆಸರು ಉಲ್ಲೇಖವಾಗಿದ್ದು, ಎಫ್‍ಐಆರ್ ದಾಖಲಾಗಿದೆ. ಈ ಸಂಬಂಧ ಎಸ್‍ಐಟಿ ಎರಡು ಬಾರಿ ನೋಟಿಸ್ ಕೊಟ್ಟರೂ ಉತ್ತರಿಸದೇ ಚಳ್ಳೆಹಣ್ಣು ತಿನ್ನಿಸುತ್ತಿರುವ ಭವಾನಿಗೆ ಬಂಧನದ ಭೀತಿ ಎದುರಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ಸೆಷನ್ಸ್ ಕೋರ್ಟ್, ನಾಳೆ (ಬುಧವಾರ) ಬೆಳಗ್ಗೆ 11 ಗಂಟೆಗೆ ಮುಂದೂಡಿದೆ.
Advertisement
Advertisement
ಇತ್ತ ಎಸ್‍ಐಟಿ ಆಕ್ಷೇಪಣಾ ಅರ್ಜಿ ಸಲ್ಲಿಸೋಕೆ ಕಾಲಾವಕಾಶ ಕೇಳಿದೆ. ಭವಾನಿ ಅವರಿಗೆ ಮೂರು ನೋಟಿಸ್ ನೀಡಲಾಗಿದೆ. ಇದೂವರೆಗೂ ವಿಚಾರಣೆಗೆ ಹಾಜರಾಗಿಲ್ಲ ಅಂತ ಎಸ್‍ಪಿಪಿ ಜಗದೀಶ್ ವಾಡ ಮಂಡಿಸಿದ್ರು. ಭವಾನಿ ಈ ಪ್ರಕರಣದ ಆರೋಪಿ ಅಂತ ಎಫ್‍ಐಆರ್ ನಲ್ಲಿ ಇದ್ಯಾ ಅಂತ ಜಡ್ಜ್ ಪ್ರಶ್ನಿಸಿದ್ರು. ಇದೂವರೆಗೂ ಎಫ್‍ಐಆರ್ ಅಲ್ಲಿ ಇಲ್ಲ. ಇನ್ನು ದಿನದಿಂದ ದಿನಕ್ಕೆ ಆರೋಪಿಗಳ ಸಂಖ್ಯೆ ಹೆಚ್ಚಿಸ್ತಾ ಇದ್ದಾರೆ ಎಂದು ಸಂದೇಶ್ ಚೌಟ ಭವಾನಿ ಪರ ವಾದಿಸಿದ್ರು. ಎಸ್‍ಐಟಿ ಆಕ್ಷೇಪಣೆಗೆ ಕೋರಿದ ಕಾರಣ ವಿಚಾರಣೆಯನ್ನು ನಾಳೆಗೆ ಮುಂದೂಡಲಾಯ್ತು.