ನವದೆಹಲಿ: ಮಾಲ್ ಮುಂದೆ ಆಟೋಗಾಗಿ ಕಾಯುತ್ತಿದ್ದ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸೆಗಿರುವ ಘಟನೆ ದಕ್ಷಿಣ ದೆಹಲಿಯ ವಸಂತ್‍ಕುಂಜ್ ಪ್ರದೇಶದಲ್ಲಿ ನಡೆದಿದೆ.
30 ವರ್ಷದ ಮಹಿಳೆ ಆತ್ಯಾಚಾರ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಐವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ ಮಹಿಳೆಯನ್ನು ಅಪಹರಿಸಿದ ಗೆಸ್ಟ್ ಹೌಸ್‍ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಲಾಗಿದೆ.
ಆಗಿದ್ದೇನು?
ಸೋಮವಾರ ರಾತ್ರಿ 11 ಗಂಟೆಗೆ ಖಾಸಗಿ ಉದ್ಯೋಗಿಯಾದ ಮಹಿಳೆಯು ಗುರುಗಾಂವ್ ಸಹರಾ ಮಾಲ್ ಬಳಿ ಆಟೋಗಾಗಿ ಕಾಯುತ್ತಿದ್ದರು. ಈ ವೇಳೆ ಸ್ಥಳಕ್ಕೆ ಕ್ಯಾಬ್‍ನಲ್ಲಿ ಬಂದ ಕಾಮುಕರು ಡ್ರಾಪ್ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಮಹಿಳೆ ನಿಮ್ಮ ಡ್ರಾಪ್ ಬೇಡವೆಂದು ತಿರಸ್ಕರಿಸಿದ್ದಾರೆ. ಕೂಡಲೇ ಐವರು ಮಹಿಳೆಯನ್ನು ಬಲವಂತವಾಗಿ ಕ್ಯಾಬ್ ನಲ್ಲಿ ಅಪಹರಿಸಿ ಹತ್ತಿರದ ವಸತಿಗೃಹಕ್ಕೆ ಹೋಗಿದ್ದಾರೆ. ಗೆಸ್ಟ್ ಹೌಸ್‍ನಲ್ಲಿ ಐವರು ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸೆಗಿದ್ದಾರೆ. ಕೊನೆಗೆ ಬೆಳಗಿನ ಜಾವ ಮಹಿಳೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ಹೋಗಿದ್ದಾರೆ.
ಸಹಾಯಕ್ಕಾಗಿ ಮಹಿಳೆ ಜೋರಾಗಿ ಕೂಗಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡ ವಸತಿಗೃಹದ ಅಡುಗೆ ಸಿಬ್ಬಂದಿ ಬಂದು ಬಾಗಿಲು ತೆಗೆದಿದ್ದಾನೆ. ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅಲ್ಲೇ ಇದ್ದ ಮತ್ತೊಬ್ಬ ಆರೋಪಿ ಮಹಿಳೆಯನ್ನು ತಡೆಯಲು ಮುಂದಾದಾಗ ಕೈಗೆ ಸಿಕ್ಕ ರಾಡ್‍ನಿಂದ ಹೊಡೆದು ತಪ್ಪಿಸಿಕೊಂಡಿದ್ದಾರೆ. ಗೆಸ್ಟ್ ಹೌಸ್ ನಿಂದ ಬಂದು ಫ್ರೆಂಡ್‍ಗೆ ಕರೆ ಮಾಡಿ ವಿಷಯ ತಿಳಿಸಿ, ಬೆಳಗಿನ ಜಾವ 4.30ಕ್ಕೆ ಐವರ ವಿರುದ್ಧ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಅಪಹರಣ ಹಾಗೂ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿಕೊಂಡು 5 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ತೆಜ್ವೀರ್ ಸಿಂಗ್, ಗೋಪಾಲ್ ಪ್ರಸಾದ್, ರೂಪ್ ದೇವ್, ಅನ್ಸುಲ್ ಹಾಗೂ ರಾಮಬಾಬು ಹರ್ಯಾಣ ಮೂಲದವರಾಗಿದ್ದು ದೆಹಲಿಯ ಖಾಸಗಿ ಕಂಪೆನಿಯ ಉದ್ಯೋಗಿಗಳೆಂದು ತಿಳಿದುಬಂದಿದೆ.