ಚಿನ್ನಾಭರಣ ಅಡವಿಟ್ಟು ಮಕ್ಕಳಿಗಾಗಿ ಶಾಲೆ ತೆರೆದ್ರು- ಪತಿಯ ಜಮೀನು ಮಾರಿ ಶಾಲಾ ವಾಹನ ಖರೀದಿ

Public TV
2 Min Read
udp public hero collage

ಉಡುಪಿ: ನಮ್ಮ ಕೈಯ್ಯಲ್ಲಿ ಶಕ್ತಿ ಇದ್ದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾಗುತ್ತೇವೆ. ನಾವೇ ಕಷ್ಟದಲ್ಲಿದ್ದರೆ ಇತರರಿಗೆ ಸಹಾಯ ಮಾಡೋದಾದ್ರು ಹೇಗೆ ಎಂದು ಯೋಚಿಸುತ್ತಾರೆ. ಆದರೆ ಉಡುಪಿ ಜಿಲ್ಲೆಯ ಕಾರ್ಕಳದ ವಿಶೇಷ ಮಕ್ಕಳ ಶಾಲೆ ನಡೆಸುತ್ತಿರುವ ಶಿಕ್ಷಕಿ ಮತ್ತು ಕುಟುಂಬ ಚಿನ್ನಾಭರಣ ಮಾರಿ, 10 ಸೆಂಟ್ಸ್ ಜಮೀನು ಮಾರಿ ವಿಶೇಷ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿದೆ.

ವಿಶೇಷ ಸಾಮಥ್ರ್ಯದ ಮಕ್ಕಳಲ್ಲಿ ಕೆಲವರಿಗೆ ಕಿವಿ ಕೇಳಿಸಿದರೆ ಮಾತು ಬರಲ್ಲ. ಮಾತು ಬಂದರೆ ಓಡಾಡೋದಕ್ಕೆ ಆಗಲ್ಲ. ಮತ್ತೆ ಕೆಲವರಿಗೆ ಬುದ್ಧಿಮತ್ತೆ ಕಡಿಮೆ ಇರುತ್ತದೆ. ಹೀಗೆ ಒಂದೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ವಿಜೇತ ಎಂಬ ಶಾಲೆಯಲ್ಲಿ ಒಂದಾಗಿದ್ದಾರೆ. ಇವರನ್ನೆಲ್ಲಾ ಒಂದು ಕಡೆ ಸೇರಿಸಿ, ಅವರಿಗೆ ತರಬೇತಿ ಕೊಡುವ ಕೆಲಸವನ್ನು ನಮ್ಮ ಪಬ್ಲಿಕ್ ಹೀರೋ ಕಾಂತಿ ಹರೀಶ್ ಮಾಡಿದ್ದಾರೆ.

udp public hero 2

ಕಾರ್ಕಳದ ಪರಪ್ಪು ಎಂಬಲ್ಲಿ ಮೂರು ವರ್ಷದ ಹಿಂದೆ ಈ ಶಾಲೆಯನ್ನು ಆರಂಭಿಸಲಾಯಿತು. ಅದಕ್ಕೂ ಮೊದಲು ಕಾಂತಿ ಬೇರೆ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. 25 ವರ್ಷ ಮೇಲ್ಪಟ್ಟ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸರ್ಕಾರ ಅನುದಾನ ನಿಲ್ಲಿಸಿದಾಗ ಈಕೆ ವಿಜೇತ ಶಾಲೆ ಆರಂಭಿಸಿದರು. ಶಾಲಾ ಕೊಠಡಿ, ಹಾಸ್ಟೆಲ್, ಊಟೋಪಚಾರ, ಚಿಕಿತ್ಸೆ ಅಂತ ತನ್ನ ಬಳಿಯಿದ್ದ ಚಿನ್ನವನ್ನೆಲ್ಲಾ ಮಾರಿ ಶಾಲೆ ಆರಂಭಿಸಿದ್ದರು. ಕಾಂತಿ ಹರೀಶ್, ಗಂಡ ಹೆಸರಲ್ಲಿದ್ದ 5 ಸೆಂಟ್ಸ್ ಜಮೀನನ್ನು ಮಾರಾಟ ಮಾಡಿ ಶಾಲೆಗೊಂದು ವಾಹನ ಖರೀದಿ ಮಾಡಿದ್ದಾರೆ.

udp public hero

ವಿಜೇತ ಶಾಲೆಯಲ್ಲಿ ಈಗ 70 ಮಕ್ಕಳಿದ್ದಾರೆ. ಶಾಲೆಯ ಬಾಡಿಗೆ, ಹಾಸ್ಟೆಲ್ ಬಾಡಿಗೆ, ಊಟ, 12 ಮಂದಿ ಶಿಕ್ಷಕರ ಸಂಬಳ, ವಾಹನದ ಲೋನ್, ಮಕ್ಕಳ ಮೆಡಿಸಿನ್, ಕಾರ್ಯಕ್ರಮಗಳು ಅಂತ ಎಲ್ಲಾ ಸೇರಿಸಿದರೆ ತಿಂಗಳಿಗೆ 2 ಲಕ್ಷ ರೂ. ಖರ್ಚು ಬರುತ್ತಿದೆ. ಸರ್ಕಾರದಿಂದ 1 ರೂಪಾಯಿ ಅನುದಾನ ಬರುತ್ತಿಲ್ಲ. ದಾನಿಗಳಿಂದ ವಿವಿಧ – ಸಂಸ್ಥೆಗಳಿಂದ ಪ್ರತಿ ತಿಂಗಳು ಸಹಾಯ ಪಡೆದು ಶಾಲೆ ನಡೆಸುತ್ತಿದ್ದಾರೆ. ಸರ್ಕಾರದ ಅನುದಾನ ಬರಬೇಕಾದರೆ ಇನ್ನೂ 2 ವರ್ಷ ಕಾಯಬೇಕು. 25 ವರ್ಷ ದಾಟಿದವರಿಗೂ ಸರ್ಕಾರ ಅನುದಾನ ಕೊಡಲಿ ಎಂದು ಕಾಂತಿ ಹರೀಶ್ ಒತ್ತಾಯಿಸುತ್ತಿದ್ದಾರೆ.

udp public hero 3

ಶ್ರೀ ಗುರು ರಾಘವೇಂದ್ರ ಎಂಬ ಟ್ರಸ್ಟ್ ಮಾಡಿಕೊಂಡು ವಿಜೇತ ವಸತಿಯುತ ಶಾಲೆಯನ್ನು ನಡೆಸಲಾಗುತ್ತಿದೆ. ಕಾಂತಿ ಅವರ ಪತಿ ಹಾಗೂ ಮಕ್ಕಳಿಗೆ ವೃತ್ತಿ ತರಬೇತಿ, ಅಡುಗೆ, ವಾಹನ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಂತಿ ಹರೀಶ್ ತಾಯಿಯವರು ಹಾಸ್ಟೆಲ್‍ನಲ್ಲಿ ಅಡುಗೆ ಶುಚಿತ್ವ ಎಲ್ಲವನ್ನು ನೋಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಕಷ್ಟದಲ್ಲಿರುವವರ ಪಾಲಿನ ಪೋಷಕಿಯಾಗಿ, ಶಿಕ್ಷಕಿಯಾಗಿ ಕಾಂತಿ ಹರೀಶ್ ಸೇವೆ ಮಾಡುತ್ತಿದ್ದಾರೆ.

ಸಹಾಯ ಮಾಡುವವರಿಗೆ ಕಾಂತಿ ಹರೀಶ್ ಅವರ ಅಕೌಂಟ್ ಡಿಟೇಲ್ಸ್ ಇಲ್ಲಿದೆ:
Vijetha home for Mentally Challenged
A.No- 520101233845530
IFSC.No – CORP0000148
MICR Code- 575017031
Corporation Bank
Karkala branch.

Shri Guru Raghavendra Seva Trust R.
A.No- 111101011003420
IFSC.No – VIJB0001111
MICR Code- 575029038
VIJAYA Bank
Karkala branch.

https://www.youtube.com/watch?v=N-tjyxjf97A

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *