ಜೈಪುರ್: ತಾಯಿಯೊಬ್ಬಳು ತನ್ನ ಐವರು ಹೆಣ್ಣುಮಕ್ಕಳನ್ನು ಜೊತೆಗೆ ಕರೆದುಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ.
Advertisement
ಮೃತರು ಕೋಟಾದ ರಾಮಗಂಜಮಂಡಿ ನಿವಾಸಿಯಾದ ಬಾದಮ್ ದೇವಿ (40) ಹಾಗೂ ಅವರ ಮಕ್ಕಳಾದ ಸಾವಿತ್ರಿ (14), ಅಂಜಲಿ (8), ಕಾಜಲ್ (6), ಗುಂಜನ್ (4) ಹಾಗೂ ಅರ್ಚನಾ (1) ಎಂದು ಗುರುತಿಸಲಾಗಿದೆ. ಬಾದಮ್ ದೇವಿ ತನ್ನ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬಾವಿಹಾರಿ ಪ್ರಾಣಬಿಟ್ಟಿದ್ದಾರೆ. ಇದನ್ನೂ ಓದಿ: ರಾಜ್ ಕುಟುಂಬದಿಂದ ಗಂಧದಗುಡಿಯ 3ನೇ ಪ್ರಯೋಗ
Advertisement
Advertisement
ಪುಟ್ಟ ಕಂದಮ್ಮ ಸೇರಿ ಆರು ಮಂದಿಯೂ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಗ್ರಾಮಸ್ಥರ ಸಹಾಯದೊಂದಿಗೆ ನಿನ್ನೆ ಬೆಳಗ್ಗೆ ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಾದಮ್ ದೇವಿ ಅವರು ತನ್ನ ಪತಿ ಶಿವಲಾಲ್‍ನೊಂದಿಗೆ ಪ್ರತಿದಿನ ಜಗಳವಾಡುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೋಟಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್