ಬೆಂಗಳೂರು: ಐಷಾರಾಮಿ ಮನೆಯಲ್ಲಿ ಕೆಲಸಕ್ಕೆಂದು ಸೇರಿ ಮಹಿಳೆಯೊಬ್ಬಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾಳೆ. ಈ ಹಿನ್ನೆಲೆ ಪೊಲೀಸರು ಆಕೆಯನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಮಾರತಳ್ಳಿಯಲ್ಲಿ ನಡೆದಿದೆ.
ಬೆಂಗಳೂರಿನ ಮಾರತಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾಟ್ರ್ಮೆಂಟ್‍ನಲ್ಲಿ ಘಟನೆ ನಡೆದಿದ್ದು, ಆರೋಪಿ ಸುಮಾ(40) ಬಂಧಿಸಿದ್ದಾರೆ. ಸುಮಾ ಮೂಲತಃ ಶಿವಮೊಗ್ಗ ಮಹಿಳೆಯಾಗಿದ್ದು, ಮುಂಬೈ ಮೂಲದ ಟೆಕ್ಕಿಯ ವಿಲ್ಲಾದಲ್ಲಿ ಚೋರಿ ಕೃತ್ಯ ನಡೆಸಿದ್ದಾಳೆ.
ನಡೆದಿದ್ದೇನು?
ಪ್ರತಿಷ್ಠಿತ ಏರಿಯಾಗಳ ಟೆಕ್ಕಿಯ ವಿಲ್ಲಾದಲ್ಲಿ ಸುಮಾ ಕೆಲಸ ಮಾಡುತ್ತಿದ್ದಳು. ಸುಮಾ ಟೆಪ್ರವರಿ ಕೆಲಸಗಾರರನ್ನು ಹುಡುಕಿದ ಮನೆಗೆ ಹೋಗಿದ್ದಳು. ಕೆಲಸ ಬಿಟ್ಟು ಹೋಗುವಾಗ ಮನೆಯಲ್ಲಿದ್ದ ವಜ್ರ, ಚಿನ್ನಾಭರಣ ಕದ್ದಿದ್ದ ಕಳ್ಳಿ. ಕೆಲದಿನಗಳ ಬಳಿಕ ಮುಂಬೈಗೆ ತೆರಳಲು ನಿರ್ಧಾರ ಮಾಡಿದ್ದ ಟೆಕ್ಕಿ ಲಾಕರ್‌ನಲ್ಲಿದ್ದ ಆಭರಣ ಇಡಲು ಹೋದಾಗ ಕಳ್ಳತನ ಕೃತ್ಯ ಬಯಲಾಗಿದೆ. ಇದನ್ನೂ ಓದಿ: ಬೆಂ.ನ.ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು: ಒತ್ತುವರಿಯಾಗಿದ್ದ ರಾಜಕಾಲುವೆ, ಖಾಸಗಿ ಬಡಾವಣೆ ತೆರವು
ಬಳಿಕ ಟೆಕ್ಕಿ ಮಾರತ್ ಹಳ್ಳಿ ಪೊಲೀಸರಿಗೆ ದೂರು ಕೊಟ್ಟಿದ್ದು, ದೂರು ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಚರಣೆ ವೇಳೆ ಮಾರತ್ ಹಳ್ಳಿ ಪೊಲೀಸರಿಂದ ಆರೋಪಿತೆ ಸುಮಾಳನ್ನು ಬಂಧನವಾಗಿದೆ. ಬಂಧಿತಳಿಂದ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ವಜ್ರಾಭರಣ ವಶಕ್ಕೆ ತೆಗೆದುಕೊಳ್ಳಲಾಗಿದೆ.