– ತಾಯಿಯ ಸಾವಿಂದ ಅನಾಥರಾದ ಹೆಣ್ಣುಮಕ್ಕಳು
ಹಾಸನ: ಬೇಲೂರಿನಲ್ಲಿ (Belur) ಪಾಳು ಬಿದ್ದಿದ್ದ ಕಟ್ಟಡದ ಸಜ್ಜಾ ಕುಸಿದು (Building Collapse) ತೀವ್ರ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಮೃತ ಮಹಿಳೆಯನ್ನು ಬೇಲೂರು ಪಟ್ಟಣದ ಹೊಸನಗರ ನಿವಾಸಿ ಜ್ಯೋತಿ (45) ಎಂದು ಗುರುತಿಸಲಾಗಿದೆ. ದುರಂತದಲ್ಲಿ ಗಾಯಗೊಂಡಿದ್ದ ಅವರನ್ನು ಹಾಸನದ (Hassan) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವಿಗೀಡಾಗಿದ್ದಾರೆ. ಈ ಮೂಲಕ ದುರ್ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಹಾಸನ| ಪಾಳು ಬಿದ್ದಿದ್ದ ಕಟ್ಟಡ ಕುಸಿತ – ಬೀದಿಬದಿ ವ್ಯಾಪಾರ ಮಾಡ್ತಿದ್ದ ಇಬ್ಬರು ದುರ್ಮರಣ
ಕುಸಿದ ಕಟ್ಟಡದ ಕೆಳಗೆ ಮಹಿಳೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಇನ್ನೂ ಕೆಲವು ತಿಂಗಳ ಹಿಂದೆ ಜ್ಯೋತಿಯವರ ಪತಿ ಗೋಪಿ ಸಹ ಸಾವನ್ನಪ್ಪಿದ್ದರು. ಇದರಿಂದ ಇಬ್ಬರು ಹೆಣ್ಣುಮಕ್ಕಳು ಅನಾಥರಾಗಿದ್ದಾರೆ.
ಮಾ.9 ರಂದು ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರಿದ್ದ ಪಾಳು ಬಿದ್ದಿದ್ದ ಕಟ್ಟಡ ಕುಸಿದಿತ್ತು. ಈ ವೇಳೆ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದು. ಇದನ್ನೂ ಓದಿ: ಮದುವೆಗೆ ಪ್ರಿಯಕರ ನಿರಾಕರಿಸಿದ್ದಕ್ಕೆ ಯುವತಿ ಸೂಸೈಡ್ – ಪುತ್ರಿ ಸಾವಿನ ಬಳಿಕ ತಾಯಿ ನೇಣಿಗೆ ಶರಣು