ಕೊಪ್ಪಳ: ಮಕ್ಕಳಿಗೆ ಕೈ ತುತ್ತು ತಿನ್ನಿಸೋದು ಕಾಮನ್. ಆದ್ರೆ ಇಲ್ಲೊಂದು ಕೋತಿಗೆ ಕೈತುತ್ತು ತಿನ್ನೋ ಭಾಗ್ಯ ಸಿಕ್ಕಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ತನ್ನ ಎರಡು ಮುಂಗೈ ಕಳೆದುಕೊಂಡಿದ್ದ ಕೋತಿಗೆ ನಿತ್ಯ ಕೈಕುತ್ತು ಉಣಿಸಿ ಮಹಿಳೆಯರು ಮಾನವೀಯತೆ ಮರೆದಿದ್ದಾರೆ.
Advertisement
Advertisement
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯಿರೋ ಅಂಜನಾದ್ರಿ ಪರ್ವತದಲ್ಲಿ ಭಿಕ್ಷುಕ ಮಹಿಳೆಯರು ಕೋತಿಗೆ ಕೈತುತ್ತು ಉಣಿಸ್ತಾರೆ. ತಾಯಿ ಹೇಗೆ ಮಗುವಿಗೆ ಕೈತುತ್ತು ನೀಡ್ತಾಳೋ ಅದೇ ರೀತಿ ಮಹಿಳೆಯರು ಯಾವುದೇ ಅಳುಕಿಲ್ಲದೆ ಕೋತಿಗೆ ಊಟ ನೀಡ್ತಾರೆ. ಇದನ್ನ ಕಂಡ ಭಕ್ತರು ಅಚ್ಚರಿ ಪಡೋದಲ್ಲದೆ ಭೀಕ್ಷುಕ ಮಹಿಳೆಯರ ಕಾರ್ಯವನ್ನ ಮೆಚ್ಚಿದ್ದಾರೆ.
Advertisement
Advertisement
ಎರಡು ಮುಂಗೈ ಕಳೆದುಕೊಂಡ ಕೋತಿ ಯಾವುದೇ ಆಹಾರ ಕೈಯಲ್ಲಿ ಸೇವಿಸೋಕೆ ಆಗಲ್ಲ. ಹಾಗಾಗಿ ಕೋತಿಯೂ ಆಹಾರಕ್ಕಾಗಿ ಈ ಮಹಿಳೆಯರನ್ನ ಅವಲಂಬಿಸಿದೆ. ಕೈತುತ್ತು ತಿನ್ನುತ್ತಾ ಕೋತಿ ಹಾಯಾಗಿ ಓಡಾಡ್ತಾ ತುಂಟತನ ಮಾಡಿ ಭಕ್ತರನ್ನ ರಂಜಿಸ್ತಿದೆ.