ಲಂಡನ್: ಮಾವಿನ ಉಪ್ಪಿನಕಾಯಿಯನ್ನು (Mango Pickle) ಸೇವಿಸಿದ ನಂತರ ಗೊರಟೆ ಗಂಟಲಿಗೆ ಸಿಕ್ಕಿಕೊಂಡು 57 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಣ್ಣು ತಿಂದ ಬಳಿಕ ನುಂಗಲು ತೊಂದರೆಯಾಗುತ್ತಿದೆ ಎಂದ ಮಹಿಳೆಯನ್ನು ಸ್ಥಳೀಯ ಎಪ್ಸಮ್ ಆಸ್ಪತ್ರೆಯ (Epsom Hospital) ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ. ಮಾವಿನಹಣ್ಣಿನಂತಹ ಮೃದುವಾದ ಹಣ್ಣು ಇಂತಹ ಹಾನಿಯನ್ನುಂಟುಮಾಡುತ್ತದೆ ಅಂತ ನಂಬಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ಬೆರಗಾಗಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರನ್ನು ಕೂಡಲೇ ವಜಾಗೊಳಿಸಿ – ರಾಷ್ಟ್ರಪತಿಗಳಿಗೆ ಡಿಎಂಕೆ ಪತ್ರ
Advertisement
Advertisement
ವೈದ್ಯಕೀಯ ಪರೀಕ್ಷೆ ವೇಳೆ ಮಹಿಳೆ ಜೊಲ್ಲು ಸುರಿಸುತ್ತಿದ್ದಳು ಮತ್ತು ನುಂಗಲು ಸಮರ್ಥಳಾಗಿದ್ದಳು. ವೈದ್ಯರು ಕೂಡ ಪರೀಕ್ಷೆಯಲ್ಲಿ ದೇಹದ ಒಳಗಡೆ ಯಾವುದೇ ಪದಾರ್ಥ ಕಂಡು ಬಂದಿಲ್ಲ. ಜಠರದ ಉರಿತದಿಂದ ಸಮಸ್ಯೆ ಉಂಟಾಗಿರಬಹುದು ಎಂದು ಮಹಿಳೆಗೆ ತಿಳಿಸಲಾಗಿದೆ. ಒಂದು ವೇಳೆ ಆರೋಗ್ಯ ಹೆಚ್ಚು ಹದಗೆಟ್ಟರೆ ಮತ್ತೆ ಹಿಂತಿರುಗುವಂತೆ ತಿಳಿಸಲಾಯಿತು ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಅನ್ಯ ಕೋಮಿನ ಯುವಕನ ಪ್ರೀತಿ ಮಾಡಿದ್ದಕ್ಕೆ ತಂದೆಯಿಂದ್ಲೇ ಮಗಳ ಕೊಲೆ
Advertisement
Advertisement
ನಾಲ್ಕು ದಿನಗಳ ನಂತರ ಸೆಪ್ಸಿಸ್‍ನ ಲಕ್ಷಣಗಳಿದ್ದರಿಂದ ಮತ್ತೆ ಆಸ್ಪತ್ರೆಗೆ ಮಹಿಳೆ ಹಿಂದಿರುಗಿ, ನುಂಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಸಿಟಿ ಸ್ಕ್ಯಾನ್ ನಡೆಸಿದಾಗ ಅನ್ನನಾಳದಲ್ಲಿ ಹುಣ್ಣಾಗಿ ಎದೆ ಉರಿ ಉಂಟಾಗಿರುವುದು ತಿಳಿದುಬಂದಿದೆ. ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಗೊರಟೆಯನ್ನು ತೆಗೆಸಿಕೊಳ್ಳಲು ಮಹಿಳೆ ನಂತರ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದರು ಮತ್ತು ಒಂದು ವಾರ ಆಸ್ಪತ್ರೆಯಲ್ಲಿದ್ದರು ಎಂದು ವರದಿಯಾಗಿದೆ.