Connect with us

2 ವರ್ಷದ ಪುಟ್ಟ ಕಂದನನ್ನು ಬಿಟ್ಟು ನೇಣಿಗೆ ಶರಣಾದ ಗೃಹಿಣಿ

2 ವರ್ಷದ ಪುಟ್ಟ ಕಂದನನ್ನು ಬಿಟ್ಟು ನೇಣಿಗೆ ಶರಣಾದ ಗೃಹಿಣಿ

ಚಿಕ್ಕಬಳ್ಳಾಪುರ: ಗೃಹಿಣಿಯೊಬ್ಬರು ತಮ್ಮ ಎರಡು ವರ್ಷದ ಹೆಣ್ಣು ಮಗುವನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ಪಟ್ಟಣದ ಮೆಹಬೂಬ್ ನಗರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ತೌಸಿಯಾ ಅಜುಂ (21) ನೇಣಿಗೆ ಶರಣಾದ ಗೃಹಿಣಿ. ತೌಸಿಯಾ ಅವರ ಗಂಡ ನವೀದ್ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಗಂಡ ಮತ್ತು ಆತನ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೆ ತೌಸಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತೌಸಿಯಾ ಸಂಬಂಧಿಕರು ಹೇಳುತ್ತಿದ್ದಾರೆ.

ನವೀದ್ ಪಾಷಾ

ಮೂರು ವರ್ಷಗಳ ಹಿಂದೆ ಕೋಲಾರದ ತೌಸಿಯಾ ಅಜುಂರನ್ನು ಚಿಂತಾಮಣಿ ನಗರದ ನವೀದ್ ಪಾಷಾಗೆ ಮದುವೆ ಮಾಡಿಕೊಡಲಾಗಿತ್ತು. ಮೊದ ಮೊದಲು ಚೆನ್ನಾಗಿ ನೋಡಿಕೊಂಡಿದ್ದ ನವೀದ್ 2 ಲಕ್ಷ ರೂ. ಹಣ ಹಾಗೂ ನಿವೇಶನ ಕೊಡಿಸುವಂತೆ ಒತ್ತಾಯ ಮಾಡಿದ್ದನು ಎಂದು ತೌಸಿಯಾ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನವೀದ್ ಪಾಷಾ

ಈ ಕುರಿತು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ನವೀದ್ ಸೇರಿದಂತೆ 6 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

Advertisement
Advertisement