ರಾಂಚಿ: ಸಾಮಾನ್ಯವಾಗಿ ಉನ್ನತ ಉದ್ದೆಯಲ್ಲಿರುವವರು ಅನಾರೋಗ್ಯ ಉಂಟಾದರೆ ಖಾಸಗಿ ಆಸ್ಪತ್ರೆಗೆ ಹೋಗುವುದು ಅಧಿಕ. ಆದರೆ ಜಾರ್ಖಂಡ್‍ನ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಜಾರ್ಖಂಡ್ ನ ಗೊಡ್ಡಾ ಪ್ರದೇಶದ ಮಹಿಳಾ ಐಎಎಸ್ ಅಧಿಕಾರಿ ಕಿರಣ್ ಕುಮಾರ್ ಪಾಸಿ ಅವರು ಸದರ್ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿರುವ ಐಎಎಸ್ ಅಧಿಕಾರಿಯನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸಿಸುತ್ತಿದ್ದಾರೆ.
Advertisement
Advertisement
ಸಾಮಾನ್ಯ ಜನರು ಕೂಡ ಸರ್ಕಾರಿ ಆಸ್ಪತ್ರೆಗೆ ಹೋಗಲು ಯೋಚನೆ ಮಾಡುತ್ತಾರೆ. ಅಂತಹವರಿಗೆ ಐಎಎಸ್ ಅಧಿಕಾರಿ ಪಾಸಿ ಅವರು ಉತ್ತಮ ಉದಾಹರಣೆ ನೀಡಿದ್ದಾರೆ. ಇದೀಗ ಕಿರಣ್ ಕುಮಾರ್ ಪಾಸಿ ಮತ್ತು ಅವರ ಮಗುವಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಅವರು ಇಲ್ಲಿಗೆ ಬಂದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಐಎಎಸ್ ಅಧಿಕಾರಿ ಮಾಡಿರುವ ಕೆಲಸದಿಂದ ಖಂಡಿತವಾಗಿಯೂ ಸರ್ಕಾರಿ ವ್ಯವಸ್ಥೆಯಲ್ಲಿ ವಿಶ್ವಾಸ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಸಿವಿಲ್ ಸರ್ಜನ್ ಎಸ್.ಪಿ ಮಿಶ್ರಾ ಹೇಳಿದ್ದಾರೆ.
Advertisement
ಕಿರಣ್ ಕುಮಾರ್ ಪಾಸಿ ಮುಂದಿನ ಎರಡು ದಿನಗಳವರೆಗೆ ಆಸ್ಪತ್ರೆಯಲ್ಲಿ ಇರುತ್ತಾರೆ. ಅವರ ಯಶಸ್ವಿ ಹೆರಿಗೆಯ ನಂತರ ಅನೇಕ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಬಂದು ಅವರನ್ನು ಅಭಿನಂದಿಸಿದ್ದಾರೆ.
ಹೆರಿಗೆಯ ನಂತರ ದಿಯೋಘರ್ ಡಿಸಿ ನ್ಯಾನ್ಸಿ ಸಹಯ್ ವೈಯಕ್ತಿಕವಾಗಿ ಸದರ್ ಆಸ್ಪತ್ರೆಗೆ ಬಂದಿದ್ದರು. ಅವರು ಕೂಡ ಕಿರಣ್ ಕುಮಾರ್ ಪಾಸಿ ಅವರನ್ನು ಶ್ಲಾಘಿಸಿದ್ದು, ನಿಮ್ಮಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಜನರಲ್ಲಿ ಆತ್ಮವಿಶ್ವಾಸ ತುಂಬುತ್ತದೆ ಎಂದು ಹೇಳಿದರು.