ಚೆನ್ನೈ: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯನ್ನು ಆತನ ಪತ್ನಿ (Wife) ಹಾಗೂ ಹಿರಿಯ ಮಗಳು (Daughter) ಸೇರಿ ಕೊಲೆ ಮಾಡಿದ ಘಟನೆ ತಮಿಳುನಾಡಿನ (Tamil Nadu) ಟುಟಿಕೋರಿನ್ ಜಿಲ್ಲೆಯಲ್ಲಿ ನಡೆದಿದೆ.
ಜ್ಞಾನಶೇಖರ್(42) ಕೊಲೆಯಾದ ವ್ಯಕ್ತಿ. ಈತ ಮೀನು ವ್ಯಾಪಾರಿಯಾಗಿದ್ದ. ಈತನ ಪತ್ನಿ ಅನೈತಿಕ ಸಂಬಂಧವನ್ನು ಹೊಂದಿದ್ದಾಳೆಂದು ಶಂಕಿಸಿದ್ದ. ಜೊತೆಗೆ ಈತನ ಹಿರಿಯ ಮಗಳು (15) ಕಾರ್ತಿಕ್ (24) ಎಂಬಾತನ ಜೊತೆಗೆ ಸಂಬಂಧವನ್ನು ಹೊಂದಿದ್ದಳು. ಇದರಿಂದಾಗಿ ಜ್ಞಾನಶೇಖರ್ ಪತ್ನಿ ಹಾಗೂ ಮಗಳಿಗೆ ಅನೈತಿಕ ಸಂಬಂಧದ ಕುರಿತು ಛೀಮಾರಿ ಹಾಕಿದ್ದ. ಅಷ್ಟೇ ಅಲ್ಲದೇ ಈ ಕುರಿತಾಗಿ ಮನೆಯಲ್ಲಿ ದೊಡ್ಡ ಜಗಳ ನಡೆದಿತ್ತು. ಇದರಿಂದಾಗಿ ಸಿಟ್ಟಿಗೆದ್ದ ಆತನ ಪತ್ನಿ ಹಾಗೂ ಹಿರಿಯ ಮಗಳು ಸೇರಿ ಜ್ಞಾನಶೇಖರ್‌ನನ್ನು ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ಬಳಿಕ ಕಾರ್ತಿಕ್‍ನ ಸಹಾಯ ಪಡೆದ ಜ್ಞಾನಶೇಖರ್‌ನ ಪತ್ನಿ ಹಾಗೂ ಮಗಳು ಆತನನ್ನು ಗೋಣಿಚೀಲದಲ್ಲಿ ತುಂಬಿ ಕಾಡಿಗೆ ಕೊಂಡೊಯ್ದಿದ್ದಾರೆ. ಅಲ್ಲಿ ಜ್ಞಾನಶೇಖರ್‌ನ ಶವವನ್ನು ಸುಟ್ಟು ತಮಗೆ ಏನೂ ಸಂಬಂಧವಿಲ್ಲದಂತೆ ನಟಿಸಿದ್ದಾರೆ. ಇದನ್ನೂ ಓದಿ: ಗ್ರಾಮಗಳಿಗೆ ನುಗ್ಗಿತು ನೀರು – ಕೆರೆ ಕಟ್ಟೆ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿ
ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅರ್ಧ ಸುಟ್ಟ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಅದು ಜ್ಞಾನಶೇಖರ್‌ನ ಶವ ಎಂದು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ಞಾನಶೇಖರ್ ಕುಟುಂಬಸ್ಥರಾದ ಆತನ ಪತ್ನಿ, ಹಿರಿಯ ಮಗಳು ಹಾಗೂ 14 ವರ್ಷದ ಕಿರಿಯ ಮಗಳನ್ನು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಮೂವರು ಬೇರೆ ಬೇರೆ ಕಥೆ ಹೇಳಿದ್ದಾರೆ. ಇದರಿಂದಾಗಿ ಅನುಮಾನಗೊಂಡ ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸಿದಾಗ ಅವರಿಗೆ ಜ್ಞಾನಶೇಖರ್ ಪತ್ನಿ ಹಾಗೂ ಮಗಳು ಸೇರಿ ಕೊಲೆ ಮಾಡಿರುವ ವಿಷಯ ಬಯಲಾಗಿದೆ. ಘಟನೆಗೆ ಸಂಬಂಧಿಸಿ ಜ್ಞಾನಶೇಖರ್ ಪತ್ನಿ, ಹಿರಿಯ ಮಗಳು ಹಾಗೂ ಕಾರ್ತಿಕ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸುಳ್ಳು ಪ್ರಕರಣ ದಾಖಲಿಸಿ, ನನ್ನನ್ನು ಬಂಧಿಸಲು ಮುಂದಾಗಿದ್ದಾರೆ: ಸಿಸೋಡಿಯಾ