ಮುಂಬೈ: ಮಹಿಳೆಯೊಬ್ಬಳು 15ರ ಬಾಲಕನಿಗೆ 20 ಸಾವಿರ ರೂ. ಮೌಲ್ಯದ ಮೊಬೈಲ್ (Mobile) ಗಿಫ್ಟ್ ಕೊಟ್ಟು ಫಜೀತಿಗೆ ಸಿಲುಕಿದ ಘಟನೆ ಮಹಾರಾಷ್ಟ್ರದ ಕಲ್ಯಾಣ್ ಎಂಬಲ್ಲಿ ನಡೆದಿದೆ.
Advertisement
ಘಟನೆ ಸಂಬಂಧ 32 ವರ್ಷದ ವಿವಾಹಿತೆಯ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಾಲಕನ ಕುಟುಂಬದ ಜೊತೆ ಮಹಿಳೆ ವಾಸವಾಗಿದ್ದಳು. ಈ ವೇಳೆ ಆಕೆ ಅಪ್ರಾಪ್ತನೊಂದಿಗೆ ಸಂಬಂಧ ಬೆಳೆಸಿದ್ದಾಳೆ. ಈ ಹಿನ್ನೆಲೆಯಲ್ಲಿ ಸದಾ ಟಚ್ನಲ್ಲಿರುವಂತೆ 20 ಸಾವಿರ ರೂ. ಮೌಲ್ಯದ ಮೊಬೈಲ್ ಗಿಫ್ಟ್ ಕೊಟ್ಟಿದ್ದಾಳೆ. ಇದನ್ನೂ ಓದಿ: ಕುವೈತ್ನಲ್ಲಿ ಗೃಹ ಬಂಧನದಲ್ಲಿದ್ದ ಮಹಿಳೆ ಕೊನೆಗೂ ಬಂಧ ಮುಕ್ತ- ಕೊಡಗು ಜಿಲ್ಲಾಡಳಿತದ ಪ್ರಯತ್ನ ಯಶಸ್ವಿ
Advertisement
Advertisement
ಇತ್ತ ಬಾಲಕನ ವರ್ತನೆಯಿಂದ ಆತನ ಪೋಷಕರು ಅನುಮಾನಗೊಂಡಿದ್ದಾರೆ. ಅಲ್ಲದೆ ಅವನ ಶಿಕ್ಷಕಿ ಜೊತೆ ಹೇಳಿ ಆತನ ಬಾಯಿ ಬಿಡಿಸುವ ಪ್ರಯತ್ನ ಕೂಡ ಮಾಡಿದ್ದಾರೆ. ಆಗ ಬಾಲಕ ನಡೆದ ಘಟನೆಯನ್ನು ಶಿಕ್ಷಕಿ ಮುಂದೆ ವಿವರಿಸಿದ್ದಾನೆ. ಬಾಲಕನ ಹೇಳಿಕೆಯನ್ನು ಶಿಕ್ಷಕಿ ಆತನ ಮನೆಯವರಿಗೆ ಮುಟ್ಟಿಸಿದ್ದಾರೆ. ಮಹಿಳೆ ಜೊತೆ ಬಾಲಕನಿಗೆ ಸಂಬಂಧ ಇರುವ ವಿಚಾರ ತಿಳಿಯುತ್ತಿದ್ದಂತೆಯೇ ಆತನ ಪೋಷಕರು ಮಹಿಳೆಯನ್ನು ಮನೆಯಿಂದ ಹೊರ ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಆಕೆ ಆತನ ಜೊತೆ ನಿರಂತವಾಗಿ ಸಂಪರ್ಕದಲ್ಲಿದ್ದಳು.
Advertisement
ಸದ್ಯ ಬಾಲಕನ ಪೋಷಕರು ನಿಡಿದ ದೂರಿನ ಆಧಾರದ ಮೇಲೆ ಮಹಿಳೆ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k