ಹುಬ್ಬಳ್ಳಿ: ಮಹಿಳೆಯೊಬ್ಬಳು ಕಂಠ ಪೂರ್ತಿ ಮದ್ಯಪಾನ ಸೇವಿಸಿ ಜಿಲ್ಲೆಯ ಬಸ್ ನಿಲ್ದಾಣದಲ್ಲಿ ರಂಪಾಟ ಮಾಡಿದ್ದಾಳೆ.
ಹಳೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕುಡಿದ ನಶೆಯಲ್ಲಿ ಬೇರೆ ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತಿಸಿದ ಮಹಿಳೆ, ಸಿಕ್ಕ ಸಿಕ್ಕವರನ್ನ ಥಳಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾಳೆ. ಅಷ್ಟೇ ಅಲ್ಲದೇ ನಾನು ಸೆಟ್ಲ್‍ಮೆಂಟ್ ನಿವಾಸಿ ಯಾರಿಗೂ ಹೆದರುವುದಿಲ್ಲ ಅಂತ ಅವಾಜ್ ಹಾಕಿ ವಿನಾಕಾರಣ ಪ್ರಯಾಣಿಕರನ್ನು ಕೆಣಕಿದ್ದಾಳೆ.
Advertisement
ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಮಹಿಳೆಯ ನಶೆ ಇಳಿದಿದ್ದು, ಅಲ್ಲಿಂದ ಪರಾರಿಯಾಗಿದ್ದಾಳೆ. ರಂಪಾಟ ಮಾಡಿದ ಮಹಿಳೆ ಯಾರು ಎನ್ನುವುದು ತಿಳಿದು ಬಂದಿಲ್ಲ. ಸ್ಥಳದಲ್ಲಿದ್ದ ಜನ ಮಹಿಳೆಯ ಗಲಾಟೆಯ ವಿಡಿಯೋವನ್ನು ಸೆರೆ ಹಿಡಿದಿದ್ದು ವೈರಲ್ ಆಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv