ವಾಷಿಂಗ್ಟನ್: ಪೋರ್ನ್ ಚಾನೆಲ್ ಸಬ್ಸ್ಕ್ರೈಬ್ ಮಾಡಿದ ಪತಿಯನ್ನು ಪತ್ನಿಯೇ ಕೊಲೆ ಮಾಡಿದ ಘಟನೆ ಅಮೆರಿಕಾದ ವಾಷಿಂಗ್ಟನ್ನಲ್ಲಿ ನಡೆದಿದೆ.
ಫ್ರ್ಯಾಂಕ್ ಹಿಲ್ ಕೊಲೆಯಾದ ಪತಿ. ಪೇಟ್ರಿಸಿಯಾ ಎನ್ ಹಿಲ್(69) ತನ್ನ ಪತಿಯನ್ನು ಕೊಲೆ ಮಾಡಿ ಜೈಲು ಪಾಲಾಗಿದ್ದಾಳೆ. ಪೇಟ್ರಿಸಿಯಾ ತನ್ನ ಪತಿ ಫ್ರ್ಯಾಂಕ್ ಜೊತೆ ದಿನನಿತ್ಯ ಜಗಳವಾಡುತ್ತಿದ್ದಳು. ಇದರಿಂದ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದಳು.
Advertisement
ಫ್ರ್ಯಾಂಕ್ಗೆ ಪೋರ್ನ್ ಸಿನಿಮಾ ನೋಡುವ ಚಟ ಹಿಡಿದಿತ್ತು. ಪೋರ್ನ್ ನೋಡಬೇಡ ಎಂದು ಪತ್ನಿ ಪೇಟ್ರಿಸಿಯಾ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದಳು. ಆದರೆ ಫ್ರ್ಯಾಂಕ್ ತನ್ನ ಪತ್ನಿಯ ಮಾತನ್ನು ಕೇಳದೇ ಪೋರ್ನ್ ಚಾನೆಲ್ ನೋಡುತ್ತಿದ್ದನು. ಇದರಿಂದ ಬೇಸತ್ತ ಪೇಟ್ರಿಸಿಯಾ ಟಿವಿಯಿಂದ ಪೋರ್ನ್ ಚಾನೆಲ್ ಡಿಲೀಟ್ ಮಾಡಿಸಿದ್ದಳು.
Advertisement
Advertisement
ಕೆಲವು ದಿನಗಳ ನಂತರ ಬಿಲ್ನಲ್ಲಿ ಪೋರ್ನ್ ಚಾನೆಲ್ನ ಹೆಸರು ಇರುವುದನ್ನು ನೋಡಿ ಪೇಟ್ರಿಸಿಯಾ ಶಾಕ್ ಆಗಿದ್ದಾಳೆ. ಫ್ರ್ಯಾಂಕ್ ಮತ್ತೆ ಪೋರ್ನ್ ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಂಡಿದ್ದನು. ಇದರಿಂದ ಕೋಪಗೊಂಡ ಪೇಟ್ರಿಸಿಯಾ ಗನ್ನಿಂದ ಪತಿಗೆ ಗುಂಡು ಹಾರಿಸಿದ್ದಾಳೆ.
Advertisement
ಫ್ರ್ಯಾಂಕ್ನನ್ನು ಕೊಲೆ ಮಾಡಿದ ಪೇಟ್ರಿಸಿಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ವಿಚಾರಣೆ ವೇಳೆ ಪೇಟ್ರಿಸಿಯಾ ಬೇರೆ ಬೇರೆ ಹೇಳಿಕೆ ನೀಡುತ್ತಿದ್ದಾಳೆ. ಹಾಗಾಗಿ ಪೊಲೀಸರು ಪೇಟ್ರಿಸಿಯಾ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂದು ತಿಳಿಸಿದ್ದಾರೆ.