ಕೋಲಾರ: ಮಳೆಯನ್ನೇ ಆಧರಿಸಿ ಸುಮಾರು ಒಂದುವರೆ ಎಕರೆ ಜಮೀನಿನಲ್ಲಿ ಅರವತ್ತಕ್ಕೂ ಹೆಚ್ಚು ಬೆಳೆಗಳನ್ನ ಬೆಳೆಯುವ ಮೂಲಕ ಕೋಲಾರದ ಮಹಿಳೆಯೊಬ್ಬರು ಮಾದರಿ ರೈತ ಮಹಿಳೆ ಅನ್ನಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ತೊಂಡಹಳ್ಳಿ ಗ್ರಾಮದ ರಾಜಮ್ಮ ಎಂಬ ರೈತ ಮಹಿಳೆ ಕಳೆದ ಅರವತ್ತು ವರ್ಷಗಳಿಂದ ತಮ್ಮ ಬಳಿ ಇರುವ ಒಂದುವರೆ ಎಕರೆ ಜಮೀನಿನಲ್ಲಿ ಸುಮಾರು 50 ರಿಂದ 60 ಸಿರಿಧಾನ್ಯ ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಸಿರಿಧಾನ್ಯಗಳಿಂದ ಆರೋಗ್ಯ ರಕ್ಷಣೆ ಕುರಿತು ಅರಿತ ಕುಟುಂಬದವರು ತಮಗೆ ವರ್ಷ ಪೂರ್ತಿಗೆ ಎಷ್ಟು ಬೇಕೋ ಅಷ್ಟು ಸಿರಿ ಧಾನ್ಯಗಳನ್ನ ಬೆಳೆದು ತಮ್ಮ ದಿನನಿತ್ಯದ ಆಹಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
Advertisement
Advertisement
ಇವರು ರಾಗಿ, ಜೋಳ, ಅವರೆ, ಗೊಂಗುರು, ಬುಷ್ ಬಿನ್ಸ್, ಚಿಕ್ಕ ಕುಂಬಳಕಾಯಿ, ಕೆಂಪುಮುದ್ರೆ ಜೋಳ, ಹಳಸಂದ್ರ, ಸಾಮೆ, ಕಪ್ಪು ಸಾಮೆ, ಔಡಲ ಬೀಜ, ಬರುಗು ಸಾಮಿ, ಕಾಕಿ ಜೋಳ, ಕಿರು ಹಳೆಸಂದ್ರೆ, ತಬೆ ಬೀಜ, ನುಗ್ಗೆಬೀಜ, ಅವರೆ ಬೀಜ, ಸಚೆ ಬೀಜ, ಬಿಳಿ ನವೆ, ಊದಲು ಬೀಜ, ಕೆಂಪು ನವಣೆ, ಎಳ್ಳು, ರಾಗಿ ಬೀಳು, ಗಿಡ್ಡ ರಾಗಿ, ಬೀಟ್ರೋಟ್, ಅರಿಸಿನ, ಟೊಮೆಟೊ, ಸೌತೆಕಾಯಿ, ಅರಿಸಿನ ಮೂಲಂಗಿ, ಈರುಳ್ಳಿ, ಬದನೆ, ಮುಸುಕ ಬದನೆ, ಕ್ಯಾರೆಟ್, ಕಡ್ಡಿ ಮೆಣಸಿನಕಾಯಿ, ಕೆಂಪು ಮೂಲಂಗಿ, ರಾಜಾಮ್ ಬೀಜ, ಮೆಂಥ್ಯ ಸೋಪ್ಪು, ತಂಬೂರಿ ಸೊರೆಕಾಯಿ ಕ್ಯಾರೆಟ್, ಉದ್ದ ಕುಂಬಳಕಾಯಿ, ಸೊರೆಬೀಜ, ಜೋಳ, ಬೀಳಿಬಿನ್ಸ್, ಸಾಮಿ, ಉದ್ದಲಬೀಜ, ಚಟ್ನಿ ಎಳ್ಳು ಸೇರಿದಂತೆ ಐವತ್ತರಿಂದ ಅರವತ್ತು ಬಗೆಯ ಧಾನ್ಯಗಳನ್ನ ಬಿತ್ತನೆ ಮಾಡಿ ಉತ್ತಮ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೇ ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಮನೆಯಲ್ಲಿ ದನಕರುಗಳ ಸಗಣಯನ್ನು ಕೃಷಿಗೆ ಬಳಸಿ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv