ಚಿಕ್ಕಮಗಳೂರು: ಶಕ್ತಿ ಯೋಜನೆ (Shakti Scheme) ಜಾರಿ ಹಿನ್ನೆಲೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ (KSRTC Bus) ಮಹಿಳೆಯರದ್ದೇ ದರ್ಬಾರ್. ವೀಕೆಂಡ್ ಶುರುವಾಗುತ್ತಲೇ ಬಸ್‌ಗಳಲ್ಲಿ ಕಾಲು ಇಡಲು ಸಾಧ್ಯವಾಗದಷ್ಟು ರಶ್. ಬಸ್‌ಗಳಲ್ಲಿ ಫ್ರೀ ಪ್ರಯಾಣ ಅಂತ ಮಹಿಳೆಯರು ಪ್ರವಾಸ, ಧಾರ್ಮಿಕ ಕ್ಷೇತ್ರಗಳಿಗೆ ಸಾಗರೋಪಾದಿಯಲ್ಲಿ ತೆರಳುತ್ತಿದ್ದಾರೆ. ಇಲ್ಲೊಬ್ಬ ಮಹಿಳೆ ಬಸ್ ಫುಲ್ ರಶ್ ಆಯ್ತು ಅಂತ ಡ್ರೈವರ್ ಸೀಟ್ ಮೂಲಕ ಹತ್ತಿರುವ ಘಟನೆ ಶೃಂಗೇರಿಯಲ್ಲಿ (Chikkamagaluru) ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ (Sringeri) ಬಸ್ ಹತ್ತಲು ಮಹಿಳೆಯರು ಪರದಾಡಿದ್ದಾರೆ. ಬಸ್‌ಗಾಗಿ ನಿಲ್ದಾಣದಲ್ಲಿ ಕಾದು ಕೂತು ಕೊನೆಗೆ ಬಸ್ ಬಂದಾಗ ಹತ್ತಲು ಮುಗಿಬಿದ್ದಿದ್ದಾರೆ. ಈ ವೇಳೆ ಮಹಿಳೆ ಬಸ್‌ನಲ್ಲಿ ಸೀಟ್ ಇಲ್ಲ, ಕಾಲು ಹಾಕಲು ಕೂಡಾ ಜಾಗ ಇಲ್ಲ ಅಂತ ಕೊನೆಗೆ ಡ್ರೈವರ್ ಸೀಟ್‌ನಿಂದಲೇ ಹತ್ತಿದ್ದಾರೆ. ಇದನ್ನೂ ಓದಿ: ಮಿಡ್‌ನೈಟ್ ಆಪರೇಷನ್, ವೇಶ್ಯಾವಾಟಿಕೆಯಲ್ಲಿ ಭಾಗಿ ಶಂಕೆ – ಸಿನಿಮಿಯ ರೀತಿಯಲ್ಲಿ ವಿದೇಶಿಗರ ಬಂಧನ
ಮಹಿಳೆ ಮೊದಲು ತನ್ನ ಮಕ್ಕಳನ್ನು ಡ್ರೈವರ್ ಸೀಟ್‌ಗೆ ಹತ್ತಿಸಿ, ಬಳಿಕ ತಾನೂ ಹತ್ತಿ ಅದೇ ಸೀಟ್‌ನಲ್ಲಿ ಕುಳಿತಿದ್ದಾರೆ.
ರಾಜ್ಯಾದ್ಯಂತ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ಇರುವ ಹಿನ್ನೆಲೆ ಧಾರ್ಮಿಕ ಸ್ಥಳವಾದ ಶೃಂಗೇರಿಗೆ ಜನರು ಹರಿದು ಬರುತ್ತಿದ್ದಾರೆ. ಅದರಲ್ಲೂ ಮಹಿಳೆಯರೇ ಹೆಚ್ಚಿದ್ದಾರೆ. ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳು ಖಾಲಿಯಿದ್ದರೂ ಅದನ್ನು ಹತ್ತದೇ ಫ್ರೀ ಪ್ರಯಾಣಕ್ಕಾಗಿ ಮಹಿಳೆಯರು ಸರ್ಕಾರಿ ಬಸ್‌ಗಳನ್ನೇ ಮುತ್ತಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮೆಜೆಸ್ಟಿಕ್‌ನಲ್ಲಿ ಮಹಿಳೆಯರ ʼಶಕ್ತಿʼ ಪ್ರದರ್ಶನ – ಮಧ್ಯರಾತ್ರಿಯೂ ಇತ್ತು ಬುಕ್ಕಿಂಗ್ ಸಾಲು!