Connect with us

Districts

7 ವರ್ಷದ ಮಗನನ್ನ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ತಾಯಿ

Published

on

ಶಿವಮೊಗ್ಗ: ತನ್ನ ಅನೈತಿಕ ಸಂಬಂಧಕ್ಕೆ ಮಗ ಅಡಚಣೆಯಾಗ್ತಾನೆಂದು ತಾಯಿಯೇ ಸುಪಾರಿ ಕೊಟ್ಟು ಮಗನನ್ನು ಕೊಲೆ ಮಾಡಿಸಿರುವ ಅಮಾನವೀಯ ಘಟನೆ ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದಲ್ಲಿ ನಡೆದಿದೆ.

7 ವರ್ಷದ ಪ್ರಮೋದ ಕೊಲೆಯಾದ ಬಾಲಕ. ಪ್ರಮೋದನ ತಾಯಿ ರೇಖಾ ಅಲಿಯಾಸ್ ಬೇಬಿ ತನ್ನ ಪ್ರಿಯಕರ ತಿಮ್ಮನಗೌಡ ಎಂಬಾತನಿಂದ ಮಗನ ಕೊಲೆ ಮಾಡಿಸಿದ್ದಾಳೆ. ಪ್ರಮೋದ ಚೋರಡಿಯ ರಾಮಕೃಷ್ಣ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ. ಇದೇ ತಿಂಗಳು ಜೂನ್ 2ರಂದು ಪ್ರಮೋದನನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ಚೋರಡಿಯ ಕುಮದ್ವತಿ ನದಿ ಬಳಿ ಪ್ರಮೋದನ ಮೃತದೇಹವನ್ನು ಎಸೆಯಲಾಗಿತ್ತು.

ರೇಖಾ ಪತಿ

ರೇಖಾ ಹತ್ತು ವರ್ಷಗಳ ಹಿಂದೆ ಹಿರೇಕೆರೂರು ತಾಲೂಕಿನ ಹಳಿಯಾಳ ಗ್ರಾಮದ ವೀರಭದ್ರ ಎಂಬವರೊಂದಿಗೆ ಮದುವೆಯಾಗಿದ್ದಳು. ಮದುವೆಯ ಆರು ತಿಂಗಳ ನಂತರ ರೇಖಾ ಪತಿಯಿಂದ ದೂರವಾಗಿದ್ದಳು. ರೇಖಾ ಮತ್ತು ತಿಮ್ಮನಗೌಡನ ನಡುವೆ ಅನೈತಿಕ ಸಂಬಂಧವಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ತಿಮ್ಮನಗೌಡನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬೇಸತ್ತು ಗಂಡನ ಕೊಲೆಗೆ 5 ಲಕ್ಷ ರೂ.ಗೆ ಸುಪಾರಿ ಕೊಟ್ಟ ಪತ್ನಿ

ರೇಖಾ ಮತ್ತು ತಿಮ್ಮನಗೌಡ ಸದ್ಯ ಪೊಲೀಸರ ವಶದಲ್ಲಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು! 

 

Click to comment

Leave a Reply

Your email address will not be published. Required fields are marked *