ಅವಳಿ ಮಕ್ಕಳಿಗೆ ವರ್ಷದ ಅಂತರ!- ಅಚ್ಚರಿಯಾದ್ರೂ ಇದು ಸತ್ಯ

Public TV
1 Min Read
twin babys

ಸ್ಯಾಕ್ರಮೆಂಟೊ: ಕ್ಯಾಲಿಫೋರ್ನಿಯಾದ ಮಹಿಳೆ ಕೇವಲ 15 ನಿಮಿಷಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರಲ್ಲೇನಿದೆ ಅಂತಹ ವಿಶೇಷ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಆ ಎರಡೂ ಮಕ್ಕಳೂ ಬೇರೆ ಬೇರೆ ವರ್ಷಗಳಲ್ಲಿ ಜನ್ಮ ಪಡೆದಿದ್ದಾರೆ ಎಂಬುದೇ ವಿಶೇಷ.

ಕ್ಯಾಲಿಫೋರ್ನಿಯಾದ ಫಾತಿಮಾ ಮಾಡ್ರಿಗಲ್ ಎಂಬ ಮಹಿಳೆ ನಾಟಿವಿಡಾಡ್ ಮೆಡಿಕಲ್ ಸೆಂಟರ್‌ನಲ್ಲಿ 15 ನಿಮಿಷಗಳ ಅಂತರದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಹೆರಿಗೆ ವಿಶೇಷವಾದುದು ಎಂದು ಆಸ್ಪತ್ರೆ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಸುದ್ದಿಯಾದ ಉದ್ಯಮಿ!

ಆಯ್ಲಿನ್ ಹಾಗೂ ಆಲ್ಫ್ರೆಡೋ ಕೇವಲ 15 ನಿಮಿಷಗಳ ಅಂತರದಲ್ಲಿ ಜನಿಸಿದ್ದಾರೆ. ಆದರೆ ಅವರಿಬ್ಬರೂ ಬೇರೆ ಬೇರೆ ವರ್ಷಗಳಲ್ಲಿ ಜನಿಸಿದ್ದಾರೆ. ಅವಳಿ ಸಹೋದರರಲ್ಲಿ ಮೊದಲನೆಯವ 31 ಡಿಸೆಂಬರ್ 2021ರ ರಾತ್ರಿ 11:45 ಕ್ಕೆ ಜನಿಸಿದರೆ, ಆತನ ಅವಳಿ ಸಹೋದರ 1 ಜನವರಿ 2022ರಂದು ಮಧ್ಯರಾತ್ರಿ 12 ಗಂಟೆಗೆ ಜನಿಸಿದ್ದಾನೆ ಎಂದು ಆಸ್ಪತ್ರೆಯ ಫೇಸ್‌ಬುಕ್ ಪುಟದಲ್ಲಿ ತಿಳಿಸಿದೆ. ಇದನ್ನೂ ಓದಿ: BBMP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

ಈ ಪೋಸ್ಟ್ಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುದ್ದಾದ ಅವಳಿ ಮಕ್ಕಳಿಗೆ ಪ್ರೀತಿ ಹಾಗೂ ಶುಭಾಶಯ ಸುರಿಮಳೆ ಹರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *