ಮೈಸೂರು: ವರಮಹಾಲಕ್ಷ್ಮಿ ಹಬ್ಬದಂದೇ ತಾಯಿಯೊಬ್ಬರು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ವಿಜಯನಗರ ನಿವಾಸಿ ಪ್ರೇಮ್ ಕುಮಾರ್ ಅವರ ಪತ್ನಿ ಸವಿತಾಗೆ 3 ಮಕ್ಕಳ ಜನ್ಮವಾಗಿದೆ. ಸವಿತಾ ತಮ್ಮ 2ನೇ ಹೆರಿಗೆಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರು ಆಪರೇಷನ್ ಮೂಲಕ ಮೂರು ಮಕ್ಕಳನ್ನು ಯಶಸ್ವಿಯಾಗಿ ಡೆಲಿವರಿ ಮಾಡಿಸಿದ್ದಾರೆ.
ಮೂರು ಮಕ್ಕಳಲ್ಲಿ ಎರಡು ಗಂಡು ಮಕ್ಕಳು, ಒಂದು ಹೆಣ್ಣು ಮಗುವಾಗಿದೆ. ಪತ್ನಿಗೆ ಮೂರು ಮಕ್ಕಳಾದ ಹಿನ್ನಲೆಯಲ್ಲಿ ಪತಿ ಪ್ರೇಮ್ ಕುಮಾರ್ ಸಂತಸ ವ್ಯಕ್ತಪಡಿಸಿದರು. ಸದ್ಯ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮೂವರು ಮಕ್ಕಳೂ ಕ್ಷೇಮವಾಗಿದ್ದಾರೆ.
ಈ ಹಿಂದೆ ಬಳ್ಳಾರಿಯಲ್ಲಿ ಮಹಿಳೆಯೊಬ್ಬರು 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಸಿರಗುಪ್ಪ ಪಟ್ಟಣದ ಸದಾಶಿವನಗರದ ಆಸ್ಪತ್ರೆಯಲ್ಲಿ ಸೀಮಾಂದ್ರದ ಕೌತಾಳಂನ ಮಾರಮ್ಮ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮದುವೆಯಾಗಿ 10 ವರ್ಷದ ನಂತರ ಏಕಕಾಲಕ್ಕೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಕುಟುಂಬದವರಿಗೆ ತ್ರಿವಳಿ ಧಮಾಕಾ ಎನ್ನುವಂತಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv