ರಾಯಚೂರು: ಅಂಬುಲೆನ್ಸ್‌ನಲ್ಲಿ (Ambulence) ಮಧ್ಯರಾತ್ರಿ ಮಾರ್ಗ ಮಧ್ಯೆಯೇ ಮಹಿಳೆಯೋರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ರಾಯಚೂರಿನ (Raichur) ಸಿರವಾರ (Siravara) ತಾಲೂಕಿನ ಕುರಕುಂದ ಗ್ರಾಮದಲ್ಲಿ ನಡೆದಿದೆ.
ಕುರಕುಂದ ಗ್ರಾಮದ ರೇಣುಕಾ ಅಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮವಿತ್ತ ಮಹಿಳೆ. ಈಕೆ ಮಧ್ಯರಾತ್ರಿ ಹೆರಿಗೆ (Delivery) ನೋವಿನಿಂದ ಬಳಲುತ್ತಿದ್ದರು. ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವ ಸಲುವಾಗಿ ಆರೋಗ್ಯ ಕವಚ 108 ಅಂಬುಲೆನ್ಸ್ ಬಂದಿತ್ತು. ಈಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯೆಯೇ ಹೆರಿಗೆಯಾಗಿದೆ. ಇದನ್ನೂ ಓದಿ: ಕರ್ತವ್ಯ ಸಮಯದಲ್ಲಿ ಲಂಚ ಪಡೆದ ಮಹಿಳಾಧಿಕಾರಿ – ಕಡ್ಡಾಯ ನಿವೃತ್ತಿಗೊಳಿಸಿ ಆದೇಶ
Advertisement
Advertisement
ಹೆರಿಗೆ ನೋವು ಹೆಚ್ಚಾದ ಹಿನ್ನೆಲೆ ಶುಶ್ರೂಷಕಿ ಲಕ್ಷ್ಮೀ ಅಂಬುಲೆನ್ಸ್‌ನಲ್ಲಿಯೇ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ನಂತರ ತಾಯಿ ಮಗುವನ್ನು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. 108 ಅಂಬುಲೆನ್ಸ್ ಸಿಬ್ಬಂದಿಯಾದ ಚಾಲಕ ಯಾಸಿನ್ ಬಿ. ಗಣೇಕಲ್ ಮತ್ತು ಶುಶ್ರೂಷಕಿ ಲಕ್ಷ್ಮೀ ಅವರಿಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಒಂದು ಸಣ್ಣ ಆ್ಯಕ್ಸಿಡೆಂಟ್.. ರಕ್ತನೂ ಬರಲಿಲ್ಲ, ಆದ್ರೆ ಬ್ರೈನ್ ಡೆಡ್!
Advertisement