ಇಸ್ಲಾಮಾಬಾದ್: ಒಂದಲ್ಲ, ಎರಡಲ್ಲ, ಏಳು ಮಕ್ಕಳಿಗೆ ಮಹಿಳೆಯೊಬ್ಬಳು ಜನ್ಮ ನೀಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಅಲ್ಲಿನ ಖೈಬರ್ ಫಖ್ತಂಖ್ವಾ ಅಬೋಟಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಏಕಕಾಲದಲ್ಲಿ 7 ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರು 5 ಮಕ್ಕಳು ಮಹಿಳೆಯ ಹೊಟ್ಟೆಯಲ್ಲಿದ್ದಾರೆ ಎಂದು ಹೇಳಿದರು. ಆದರೆ ಹೆರಿಗೆ ವೇಳೆ 7 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ 7 ಮಕ್ಕಳು ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ. ಇದನ್ನು ಓದಿ: ರಾಹುಲ್ ಗಾಂಧಿ ಡ್ರಗ್ ಪೆಡ್ಲರ್: ಕಟೀಲ್
8 ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ಶನಿವಾರ ಮೊದಲ ಬಾರಿಗೆ ಈ ಆಸ್ಪತ್ರೆಗೆ ಬಂದಿದ್ದರು. ಆ ಸಮಯದಲ್ಲಿ ಆಕೆಯ ಗರ್ಭದಲ್ಲಿ ಐದು ಮಕ್ಕಳಿದ್ದವು ಎಂದು ತಿಳಿದುಬಂತು. ಮಹಿಳೆಯ ರಕ್ತದೊತ್ತಡ ತುಂಬಾ ಹೆಚ್ಚಾಗಿತ್ತು. ಅವಳ ಹೊಟ್ಟೆಯೂ ತುಂಬಾ ಊದಿಕೊಂಡಿತ್ತು. ಆಪರೇಷನ್ ಆಯ್ಕೆಯೂ ಅಪಾಯಕಾರಿ, ಏಕೆಂದರೆ ಮಹಿಳೆ ಈ ಹಿಂದೆ ಎರಡು ಆಪರೇಷನ್‍ಗೆ ಒಳಗಾಗಿದ್ದಳು. ಆಕೆಯ ಹಳೆಯ ಹೊಲಿಗೆಗಳು ಮತ್ತು ಗರ್ಭಾಶಯಕ್ಕೆ ಹಾನಿಯಾಗಬಹುದೆಂಬ ಭಯವೂ ಇತ್ತು. ಹೀಗಾಗಿ ವೈದ್ಯರ ತಂಡವು ಒಂದು ಗಂಟೆಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿ ನಂತರ ಮಾಡಿಸಿದರು. ಸದ್ಯ ಮಹಿಳೆಯ ICUನಲ್ಲಿ ಇದ್ದು, ಎಲ್ಲಾ ಏಳು ಮಕ್ಕಳು ಮತ್ತು ಮಹಿಳೆ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ. ಇದನ್ನು ಓದಿ: ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ಮಾನಸಿಕ ಅಸ್ವಸ್ಥ: ದಿನೇಶ್ ಗುಂಡೂರಾವ್
ಯಾರ್ ಮೊಹಮ್ಮದ್ ಅವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ತಕ್ಷಣ ಅಲ್ಲಿನ ಜಿನ್ನಾ ಅಂತರಾಷ್ಟ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ 7 ಮಕ್ಕಳಲ್ಲಿ ನಾಲ್ಕು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳಿಗೆ ಮೊಹಮ್ಮದ್ ಪತ್ನಿ ಜನ್ಮ ನೀಡಿದ್ದಾರೆ.