ದಾವಣಗೆರೆ: ಬಟ್ಟೆ ಅಂಗಡಿಯ ಕೆಲಸಕ್ಕೆಂದು ಬಂದ ಯುವತಿ ರಂಜಿತಾ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ನಡೆದು ಒಂದೂವರೆ ತಿಂಗಳಾದರೂ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.
ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ದ್ಯಾಮಪ್ಪ, ರತ್ನಮ್ಮ ದಂಪತಿಯ ದ್ವಿತೀಯ ಪುತ್ರಿ ರಂಜಿತಾ ದಾವಣಗೆರೆಯ ಸಮರ್ಥ ಟೆಕ್ಸ್‍ಟೈಲ್ಸ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಪ್ರತಿನಿತ್ಯ ಕಕ್ಕರಗೊಳ್ಳದಿಂದ ದಾವಣಗೆರೆ ಓಡಾಡುತ್ತಿದ್ದ ರಂಜಿತಾ ಅಕ್ಟೋಬರ್ 9ರಂದು ಕೆಲಸಕ್ಕೆಂದು ಬಂದವಳು ಮನೆಗೆ ವಾಪಸ್ಸು ಹೋಗಿರಲಿಲ್ಲ.
Advertisement
Advertisement
ಮಗಳು ಮನೆಗೆ ಬಾರದ ಇದ್ದ ಕಾರಣ ಕುಟುಂಬಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಮಗಳಿಗೆ ಪೋಷಕರು ಹುಡುಕಾಟ ನಡೆಸಿದರೂ ಸಿಕ್ಕರಲಿಲ್ಲ. ಕೊನೆಗೆ ದಾವಣಗೆರೆ ಹೊರವಲಯದ ಕೇಂದ್ರೀಯ ವಿದ್ಯಾಲಯದ ಕರೂರು ಇಂಡಸ್ಟ್ರೀಯಲ್ ಏರಿಯದಲ್ಲಿ ರಂಜಿತಾಳ ಮೃತ ದೇಹ ಪತ್ತೆಯಾಗಿತ್ತು. ಆಕೆಯನ್ನು ಯಾರೋ ಕಿಡಿಗೇಡಿಗಳು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು.
Advertisement
ಈ ಸಂಬಂಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಂಜಿತಾಳ ಮೇಲೆ ನಡೆದ ಅತ್ಯಾಚಾರ ಖಂಡಿಸಿ ದಾವಣಗೆರೆಯಲ್ಲಿ ವಿವಿಧ ಸಂಘಟನೆಗಳು, ಪೋಷಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದವು. ಇಷ್ಟಾದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಇದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದ್ದಲ್ಲದೆ, ಪ್ರಕರಣದಲ್ಲಿ ರಾಜಕೀಯ ಒತ್ತಡಗಳು ಏನಾದರೂ ಪೊಲೀಸರ ತನಿಖೆಗೆ ಒತ್ತಡ ಹಾಕುತ್ತಿದ್ದಾರೆ ಎನ್ನುವ ಅನುಮಾನಗಳು ಹುಟ್ಟುಹಾಕಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv