ಸಾಮೂಹಿಕ ಅತ್ಯಾಚಾರ ಮಾಡಿ ಮಹಿಳೆಯನ್ನು ಕೊಲೆಗೈದ ಪಾಪಿಗಳು

Public TV
1 Min Read
police jaipua

ಜೈಪುರ: ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಆಕೆಯನ್ನು ಕೊಲೆಗೈದಿರುವ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿದೆ. ಈ ಹಿನ್ನೆಲೆ  ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ದೌಸಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಭಾನುವಾರ 35 ವರ್ಷದ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿದ ಪಾಪಿಗಳು, ಆಕೆಯನ್ನು ಕೊಲೆ ಮಾಡಿದ್ದರು. ಈ ಪರಿಣಾಮ ಪೊಲೀಸರು ಆರೋಪಿಗಳಿಗಾಗಿ ಬಲೆ ಹಾಕಿದ್ದು, ಸೋಮವಾರ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇತರ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಾಲೀಕನ ಅನುಮತಿ ಇಲ್ಲದೇ ಸಮೋಸಾ ತಿಂದಿದ್ದಕ್ಕೆ ಕೊಲೆ

KILLING CRIME

ನಡೆದಿದ್ದೇನು?
ಈ ಕುರಿತು ದೌಸಾದ ಪೊಲೀಸ್ ಅಧೀಕ್ಷಕ ರಾಜ್‍ಕುಮಾರ್ ಗುಪ್ತಾ ವಿವರಿಸಿದ್ದು, ಮಹಿಳೆ ಭಾನುವಾರ ಬೆಳಗ್ಗೆ ಜೈಪುರದಿಂದ ದೌಸಾಗೆ ಬಸ್ಸಿನಲ್ಲಿ ಹೋಗುತ್ತಿದ್ದಳು. ಬಸ್ಸನ್ನು ಇಳಿದು ತನ್ನ ಪೋಷಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳು ತಮ್ಮ ಕಾರಿನಲ್ಲಿ ಲಿಫ್ಟ್ ನೀಡುವುದಾಗಿ ಹತ್ತಿಸಿಕೊಂಡಿದ್ದಾರೆ.

ಮಹಿಳೆ ಕೇಳಿದ ಜಾಗಕ್ಕೆ ಬಿಟ್ಟು ಬೇರೆ ಪ್ರದೇಶಕ್ಕೆ ಕರೆದುಕೊಂಡು ಹೋದ ಆರೋಪಿಗಳು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ ಆರೋಪಿಗಳು ಮಹಿಳೆಯನ್ನು ಕೊಂದು ಆಕೆಯ ದೇಹವನ್ನು ಬಾವಿಗೆ ಎಸೆದು ಪರಾರಿಯಾಗಿದ್ದಾರೆ. ಇದನ್ನೂ ಓದಿ:  ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ – ಜಿಗ್ನೇಶ್ ಮೇವಾನಿ ವಿರುದ್ಧ ಮತ್ತೊಂದು ಕೇಸ್

Police Jeep 1 1

ಸೋಮವಾರ ಬೆಳಗ್ಗೆ ಮಹಿಳೆಯ ಶವವನ್ನು ಬಾವಿಯಿಂದ ಹೊರತೆಗೆಯಲಾಯಿತು. ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅಪರಾಧಕ್ಕೆ ಬಳಸಿದ ಕಾರನ್ನು ಗುರುತಿಸಲಾಗಿದೆ. ಈ ಆಧಾರ ಮೇಲೆ ಆರೋಪಿಗಳನ್ನು ಹುಡುಕುತ್ತಿದ್ದೇವೆ ಎಂದು ಹೇಳಿದ್ದಾರೆ.

Share This Article