ನವದೆಹಲಿ: 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಗುರುವಾರ ತಡರಾತ್ರಿ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ವಿದ್ಯುತ್ ನಿರ್ವಹಣಾ ಸಿಬ್ಬಂದಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ಕೊಠಡಿಯ ಹೊರಗೆ ಕಾವಲು ಕಾಯುವ ಮೂಲಕ ಕೃತ್ಯಕ್ಕೆ ಸಹಕಾರ ನೀಡಿದ ಮತ್ತಿಬ್ಬರನ್ನು ಕೂಡ ಬಂಧಿಸಲಾಗಿದೆ. ಇದನ್ನೂ ಓದಿ: ನನ್ನ ಲೆವಲ್‍ಗೆ ಮಾತನಾಡೋರು ಇದ್ರೆ ನಾನು ಮಾತಾಡ್ತೇನೆ- ಜಮೀರ್‌ಗೆ ಡಿಕೆಶಿ ಟಾಂಗ್
Advertisement
Advertisement
ಆರೋಪಿಗಳನ್ನು ಸತೀಶ್ ಕುಮಾರ್ (35), ವಿನೋದ್ ಕುಮಾರ್ (38), ಮಂಗಲ್ ಚಂದ್ ಮೀನಾ (33) ಮತ್ತು ಜಗದೀಶ್ ಚಂದ್ (37) ಎಂದು ಗುರುತಿಸಲಾಗಿದೆ. ಈ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಾದ ಎರಡು ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿ, ದೆಹಲಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗಿದೆ ಮತ್ತು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಡಿಸಿಪಿ (ರೈಲ್ವೇ) ಹರೇಂದ್ರ ಸಿಂಗ್ ತಿಳಿಸಿದ್ದಾರೆ.
Advertisement
Advertisement
ಜುಲೈ 22 ರಂದು ಮುಂಜಾನೆ 3:27ರ ಸುಮಾರಿಗೆ ಘಟನೆ ಕುರಿತಂತೆ ನಮಗೆ ಮಾಹಿತಿ ದೊರೆತಿದ್ದು, ರೈಲ್ವೆ ನಿಲ್ದಾಣದ ಕೊಠಡಿಯೊಳಗೆ ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ. ಇದನ್ನೂ ಓದಿ: ಈದ್ಗಾ ಮೈದಾನ ನಮ್ಮದೇ ಬಿಬಿಎಂಪಿಗೆ ವಾರ್ನಿಂಗ್ ನೀಡಿದ ವಕ್ಫ್ ಬೋರ್ಡ್ – ಸಿಎಂ ಮಧ್ಯಪ್ರವೇಶಕ್ಕೆ ಕಸರತ್ತು
New Delhi Railway Station gang rape case
The victim, aged 30, was raped in the electrical maintenance staff hut at Railway Station platform 8-9 Thursday night. All 4 accused are Railway Employees in Electrical Department & have been arrested: DCP Railway Harendra Singh pic.twitter.com/qKsSDVQpRY
— ANI (@ANI) July 23, 2022
ಕಳೆದ ಒಂದು ವರ್ಷದಿಂದ ಪತಿಯಿಂದ ದೂರವಿದ್ದ ಮಹಿಳೆ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊಕದ್ದಮೆಯಲ್ಲಿ ತೊಡಗಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಸ್ನೇಹಿತನ ಮೂಲಕ ಮಹಿಳೆಗೆ ಆರೋಪಿಗಳಲ್ಲಿ ಓರ್ವನ ಪರಿಚಯವಾಗಿತ್ತು. ತಾನು ರೈಲ್ವೇ ಉದ್ಯೋಗಿಯಾಗಿದ್ದು ಮಹಿಳೆಗೂ ಕೆಲಸ ಕೊಡಿಸುವುದಾಗಿ ಹೇಳಿದ್ದನು. ನಂತರ ಮಹಿಳೆಯೊಂದಿಗೆ ಫೋನ್‍ನಲ್ಲಿ ಮಾತನಾಡಲು ಪ್ರಾರಂಭಿಸಿದ ಆರೋಪಿ ಜುಲೈ 21 ರಂದು ತನ್ನ ಮಗನ ಹುಟ್ಟುಹಬ್ಬದ ಜೊತೆಗೆ ಹೊಸ ಮನೆ ಖರೀಸುತ್ತಿರುವ ಪ್ರಯುಕ್ತ ಔತಣಕೂಟಕ್ಕೆ ಮಹಿಳೆಯನ್ನು ಮನೆಗೆ ಆಹ್ವಾನಿಸಿದ್ದನು.
ನಂತರ ಮಹಿಳೆಯನ್ನು ಕೀರ್ತಿ ನಗರ ಮೆಟ್ರೋ ನಿಲ್ದಾಣದಿಂದ ರಾತ್ರಿ 10:30ರ ಸುಮಾರಿಗೆ ಕರೆದುಕೊಂಡು ರೈಲ್ವೇ ನಿಲ್ದಾಣಕ್ಕೆ ಹೋದನು. ಬಳಿಕ ಕೊಠಡಿಯೊಂದರಲ್ಲಿ ಕುಳಿತುಕೊಳ್ಳಲು ತಿಳಿಸಿ ಹೊರಗೆ ಹೋಗಿದ್ದ ಆರೋಪಿ, ನಂತರ ತನ್ನ ಸ್ನೇಹಿತನೊಂದಿಗೆ ಆಗಮಿಸಿ ಕೊಠಡಿಯ ಬಾಗಿಲ ಚಿಲಕ ಹಾಕಿ ಒಬ್ಬರ ನಂತರ ಒಬ್ಬರು ಅತ್ಯಾಚಾರವೆಸಗಿದ್ದಾರೆ ಮತ್ತು ಇನ್ನಿಬ್ಬರು ಸಿಬ್ಬಂದಿ ಕೊಠಡಿಯ ಹೊರಗೆ ನಿಂತು ಕಾವಲು ಕಾಯುವ ಮೂಲಕ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.