ಲಕ್ನೋ: ನಾಲ್ವರು ಕಾಮುಕರು ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆ ಗರ್ಭ ಧರಿಸಿದ ಘಟನೆ ನಡೆದಿದೆ. ಗರ್ಭಿಣಿಯಾಗಿರುವ ವಿಷಯ ತಿಳಿದ ಕಿಡಿಗೇಡಿಗಳು ಆಕೆಯ ಮೇಲೆ ಹಲ್ಲೆ ನಡೆಸಿ ಗರ್ಭಪಾತ ಆಗುವಂತೆ ಮಾಡಿದ್ದಾರೆ.
ಉತ್ತರಪ್ರದೇಶದ ದೇವಬಂದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ. ಇದನ್ನೂ ಓದಿ: 48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್
Advertisement
Advertisement
ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲಾಗಿತ್ತು. ಆಕೆ ಗರ್ಭಿಣಿಯಾಗಿದ್ದಾಳೆಂದು ತಿಳಿದ ಕೂಡಲೇ ಆಕೆಯನ್ನು ಕೊಲ್ಲಲು ಮುಂದಾಗಿದ್ದಾರೆ. ಜೂನ್ 25 ರಂದು ಆಕೆ ಅವರಿಂದ ತಪ್ಪಿಸಿಕೊಂಡು ಮನೆಗೆ ಮರಳಿದ್ದಳು. ಜೂನ್ 26 ರಂದು ನಾಲ್ವರೂ ಆಕೆಯ ಮನೆಗೆ ಬಂದು ಮತ್ತೆ ಆಕೆಯ ಮೇಲೆ ಹಲ್ಲೆ ನಡೆಸಲಾಗಿ ಆಕೆಗೆ ಗರ್ಭಪಾತವಾಗಿದೆ ಎಂದು ಎಸ್ಪಿ ಸೂರಜ್ ರೈ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಭಾಸ್, ಅನುಷ್ಕಾ ಶೆಟ್ಟಿ ಕೊಟ್ರು ಗುಡ್‌ನ್ಯೂಸ್: ಮತ್ತೆ ಒಂದಾದ ‘ಬಾಹುಬಲಿ’ ಜೋಡಿ
Advertisement
Advertisement
ದೂರಿನಲ್ಲಿ ಏನಿದೆ?
ಜನವರಿಯಲ್ಲಿ ತಾನು ಒಬ್ಬಂಟಿಯಾಗಿರುವಾಗ ಯುವಕನೊಬ್ಬ ತನ್ನ ಮನೆಗೆ ಪ್ರವೇಶಿಸಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೃತ್ಯವನ್ನು ಚಿತ್ರೀಕರಿಸಿದ್ದಾನೆ. ದೂರು ನೀಡಿದರೆ ಪೋಷಕರನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ವೀಡಿಯೋವನ್ನು ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸಿದ್ದಾನೆ. ನಂತರ ನನ್ನ ಮೇಲಿನ ಲೈಂಗಿಕ ದೌರ್ಜನ್ಯ ಮುಂದುವರಿಸಿದ್ದಾನೆ. ಅಲ್ಲದೆ ದೇವಬಂದ್‌ನ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಒತ್ತೆಯಾಳಾಗಿರಿಸಿ ಇತರ ಮೂವರಿಂದಲೂ ಅತ್ಯಾಚಾರ ಮಾಡಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.