ಚಂಡೀಗಢ: ಲಿಫ್ಟ್ ನೀಡುವುದಾಗಿ ತಿಳಿಸಿ ಮಹಿಳೆಯನ್ನು ಕಾರಿನಲ್ಲಿ ಅಪಹರಿಸಿ, ಚಲಿಸುತ್ತಿದ್ದ ವಾಹನದಲ್ಲೇ 2 ಗಂಟೆ ಸಾಮೂಹಿಕ ಅತ್ಯಾಚಾರ ನಡೆಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಡಿ.29ರ ರಾತ್ರಿ ಹರಿಯಾಣದ (Haryana) ಫರಿದಾಬಾದ್‌ನಲ್ಲಿ (Faridabad) ಈ ಕೃತ್ಯ ನಡೆದಿದೆ. ಸಂತ್ರಸ್ತೆಯು ವಿವಾಹಿತೆಯಾಗಿದ್ದು (28), ಮೂವರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. .ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಗೆ ಗುಂಡಿಕ್ಕಿ ಕೊಲೆ; ತಿಂಗಳಲ್ಲಿ ನಡೆದ ಮೂರನೇ ಹತ್ಯೆ
ಘಟನೆ ನಡೆದ ದಿನ ರಾತ್ರಿ ಸಂತ್ರಸ್ತೆ ಕ್ಯಾಬ್‌ಗಾಗಿ ಕಾಯುತ್ತಿದ್ದರು. ಈ ವೇಳೆ ವ್ಯಾನ್‌ವೊಂದರಲ್ಲಿ ಬಂದ ಆರೋಪಿಗಳು ಸಂತ್ರಸ್ತೆಗೆ ಲಿಫ್ಟ್ ನೀಡುವುದಾಗಿ ತಿಳಿಸಿ, ವಾಹನದಲ್ಲಿ ಹತ್ತಿಸಿಕೊಂಡಿದ್ದರು. ವ್ಯಾನ್‌ನಲ್ಲಿ ಸಂತ್ರಸ್ತೆಯನ್ನು ಅಪಹರಿಸಿ, ಗುರುಗ್ರಾಮ್ ಕಡೆಗೆ ಹೊರಟಿದ್ದಾರೆ. ಈ ವೇಳೆ ಚಲಿಸುತ್ತಿದ್ದ ವಾಹನದಲ್ಲಿಯೇ ಸಂತ್ರಸ್ತೆಯ ಮೇಲೆ ಸುಮಾರು 2:30 ಗಂಟೆಗಳ ಕಾಲ ಅತ್ಯಾಚಾರ ಎಸಗಿದ್ದಾರೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ ಎಸ್‌ಜಿಎಂ ನಗರದ ರಾಜ ಚೌಕ್ ಬಳಿ ಸಂತ್ರಸ್ತೆಯನ್ನು ಎಸೆದು ಹೋಗಿದ್ದಾರೆ. ಈ ವೇಳೆ ಮುಖಕ್ಕೆ ತೀವ್ರ ಗಾಯಗಳಾಗಿ, ರಕ್ತಸ್ರಾವವಾಗಿತ್ತು. ಆ ಸ್ಥಿತಿಯಲ್ಲಿಯೂ ಸಂತ್ರಸ್ತೆ ತನ್ನ ಸಹೋದರಿಗೆ ಕರೆ ಮಾಡಿ, ನಡೆದ ವಿಷಯವನ್ನು ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 12 ಹೊಲಿಗೆ ಹಾಕಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಸಂತ್ರಸ್ತೆಯ ಸಹೋದರಿ ದೂರು ದಾಖಲಿಸಿದ್ದು, ಘಟನೆ ನಡೆದ ಒಂದು ದಿನ ಮೊದಲು ರಾತ್ರಿ 8.30ರ ಸುಮಾರಿಗೆ ನನಗೆ ಕರೆ ಮಾಡಿ, ತಾಯಿ ಜೊತೆ ಜಗಳವಾಗಿದೆ. ಹೀಗಾಗಿ ಸ್ನೇಹಿತೆಯ ಮನೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಳು ಎಂದು ಉಲ್ಲೇಖಿಸಿದ್ದಾರೆ.
ದೂರಿನನ್ವಯ ಎಫ್‌ಐಆರ್ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಮೊಮ್ಮಗಳು ಕ್ಯಾನ್ಸರ್‌ನಿಂದ ಸಾವು

