ಹೈದರಾಬಾದ್: ಕುಡಿಯೋಕೆ ನೀರು ಕೇಳಲು ಬಂದು ಕೈ ಕಟ್ಟಿ, ಚಾಕು ತೋರಿಸಿ ಅತ್ಯಾಚಾರವೆಸಗಿರುವ ಘಟನೆ ಆಂಧ್ರಪ್ರದೇಶದ (Andhrapradesh) ಪಲ್ನಾಡು (Palnadu) ಜಿಲ್ಲೆಯ ಮಾಚೆರ್ಲಾ ( Macherla) ಪಟ್ಟಣದಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆಯು (30) ಸರ್ಕಾರಿ ಉದ್ಯೋಗಿಯಾಗಿದ್ದು, ಮನೆಯಲ್ಲಿ ಒಬ್ಬರೇ ಇರುವಾಗ ಬಂದು ದುಷ್ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೇರಳದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಶಶಿ ತರೂರ್ ಮೇಲೆ ಹಲ್ಲೆಗೆ ಯತ್ನ – ಐವರ ವಿರುದ್ಧ FIR
ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆ ನಡೆದ ದಿನ ಮಧ್ಯಾಹ್ನ 3:30ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೋರ್ವ ಮನೆಗೆ ಬಂದು ಕುಡಿಯಲು ನೀರು ಕೇಳಿದ್ದಾನೆ. ಅವರು ಒಳಗೆ ಹೋಗುತ್ತಿದ್ದಂತೆ ಹಿಂದಿನಿಂದ ಎಗರಿ, ಬಲವಂತವಾಗಿ ಬಟ್ಟೆಯಿಂದ ಕೈ ಕಟ್ಟಿ ಚಾಕು ತೋರಿಸಿದ್ದಾನೆ. ಬಳಿಕ ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿ, ಲೈಂಗಿಕವಾಗಿ ಚಿತ್ರಹಿಂಸೆ ನೀಡಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ನೆರೆಹೊರೆಯವರು ಹಾಗೂ ಸಂಬಂಧಿಕರ ಸಂಪರ್ಕಕ್ಕೆ ಮಹಿಳೆ ಸಿಗದ ಕಾರಣ ಮನೆಗೆ ಧಾವಿಸಿದ್ದಾರೆ. ಆಗ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಕೂಡಲೇ ಮಾಚೆರ್ಲಾದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನರಸರಾವ್‌ಪೇಟ ಏರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆ ಆರೋಗ್ಯವಾಗಿದ್ದು, ನಿಗಾದಲ್ಲಿರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನೂ ಸಂತ್ರಸ್ತ ಮಹಿಳೆಯ ಮನೆಗೆ ವಿಧಿವಿಜ್ಞಾನ ತಂಡ ಆಗಮಿಸಿ, ಬೆರಳಚ್ಚು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸದ್ಯ ಆರೋಪಿಯನ್ನು ಗುರುತಿಸಲು ವಿಶೇಷ ತಂಡ ರಚಿಸಲಾಗಿದ್ದು, ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ಬಗ್ಗೆ ವದಂತಿ ಹರಡಬೇಡಿ. ಮಾಹಿತಿ ಇರುವ ಯಾರಾದರೂ ಮುಂದೆ ಬಂದು ವಿಚಾರಣೆಗೆ ಸಹಾಯ ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಜಿಮ್ ಟ್ರೈನರ್‌ನಿಂದ ಲವ್ ಜಿಹಾದ್ – ಹಿಂದೂ ಯುವತಿಯರೇ ಟಾರ್ಗೆಟ್, ವಿಡಿಯೋ ಇಟ್ಕೊಂಡು ಬ್ಲಾಕ್‌ಮೇಲ್

