ಮುಂಬೈ: ಮದುವೆಯಾದ ಮೂರು ತಿಂಗಳಿಗೆ 27 ವರ್ಷದ ವಿವಾಹಿತೆಯೊಬ್ಬರ ಮೃತದೇಹ ಆಕೆಯ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ರೇಷ್ಮಾ ಸಿಂಗ್ ಮೃತ ಮಹಿಳೆ. ಈಕೆ ತನ್ನ ಪತಿ ಮತ್ತು ಅತ್ತೆ-ಮಾವರ ಜೊತೆ ನಲಸೋಪರಾ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಶುಕ್ರವಾರ ರಾತ್ರಿ ಸೀಲಿಂಗ್ ಫ್ಯಾನಿನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಆಕೆಯ ಸಹೋದರ ಮತ್ತು ಸಂಬಂಧಿಗಳು ಇದು ಕೊಲೆ ಎಂದು ಆರೋಪಿಸುತ್ತಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಮೃತ ರೇಷ್ಮಾ ಸ್ಯಾಂಟಾಕ್ರೂಜ್‍ನಲ್ಲಿ ನಿವಾಸಿಯಾಗಿದ್ದು, ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ರೇಷ್ಮಾ ಫೆಬ್ರವರಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಸುಶಿಲ್ ಸಿಂಗ್ ಜೊತೆ ಮದುವೆಯಾಗಿದ್ದರು. ವಿವಾಹವಾದ ನಂತರ ಪತಿಯ ಪೋಷಕರು ಮತ್ತು ತಮ್ಮಿಬ್ಬರು ಒಡಹುಟ್ಟಿದವರ ಜೊತೆ ವಾಸಿಸುತ್ತಿದ್ದರು. ಸೋದರ ಶಿಕ್ಷಕನಾಗಿ ಹಾಗೂ ಸಹೋದರಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ರೇಷ್ಮಾ ಸೋದರಳಿಯ ಹೇಳಿದ್ದಾರೆ.
Advertisement
ಶುಕ್ರವಾರ ರಾತ್ರಿ ರೇಷ್ಮಾ ಸಹೋದರ ಮತ್ತು ಅತ್ತಿಗೆ ಮಾರುಕಟ್ಟೆಯಿಂದ ಮನೆಗೆ ಬಂದಿದ್ದಾರೆ. ಆದರೆ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿತ್ತು. ನಂತರ ಎಷ್ಟೆ ಕರೆದರೂ ರೇಷ್ಮಾ ಬಾಗಿಲು ತೆಗೆಯಲಿಲ್ಲ. ಕೊನೆಗೆ ಡೋರ್ ಮುರಿದು ಮನೆಯೊಳಗೆ ಹೋಗಿದ್ದಾರೆ. ಆಗ ರೇಷ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
Advertisement
ಶುಕ್ರವಾರ ರಾತ್ರಿ ಸುಮಾರು 7 ಗಂಟೆಗೆ ಮೃತ ದೇಹವು ಪತ್ತೆಯಾಗಿದೆಯೆಂದು ರೇಷ್ಮಾ ಕುಟುಂಬದವರು ಹೇಳಿದ್ದಾರೆ. ಆದರೆ ಎರಡು ಗಂಟೆ ಅಂದರೆ 9 ಗಂಟೆಗೆ ಅವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ರೇಷ್ಮಾ ದೇಹದ ಮೇಲೆ ಕಪ್ಪು ಗುರುತುಗಳು ಕಂಡು ಬಂದಿವೆ. ಹೀಗಾಗಿ ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ತಿಳಿಯುತ್ತದೆ. ಆದ್ದರಿಂದ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ರೇಷ್ಮಾ ಸಂಬಂಧಿ ಬ್ರಿಜೆಶ್ ಸಿಂಗ್ ತಿಳಿಸಿದ್ದಾರೆ.
ಈ ಪ್ರಕರಣ ಕುರಿತಂತೆ ನಾವು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತೇವೆ. ರೇಷ್ಮಾಳ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಒಂದು ವೇಳೆ ಈ ಪ್ರಕರಣದಲ್ಲಿ ಅನುಮಾನಾಸ್ಪದ ಬೆಳವಣಿಗೆಗಳು ಕಂಡು ಬಂದರೆ ಸೂಕ್ತ ಕಾನೂನಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಇನ್ಸ್ ಪೆಕ್ಟರ್ ರಾಜೀವ್ ನರವಾಡೆ ತಿಳಿಸಿದ್ದಾರೆ.