ನಪುಂಸಕ ಪತಿ ಮತ್ತು ಆತನ ಪೋಷಕರ ವಿರುದ್ಧ ಪತ್ನಿಯಿಂದ ದೂರು

Public TV
1 Min Read
husband wife

ನವದೆಹಲಿ: ನಪುಂಸಕ ಪತಿ ವಿರುದ್ಧ 25 ವರ್ಷದ ಪತ್ನಿಯೊಬ್ಬರು ದೂರು ನೀಡಿದ್ದಾರೆ.

ನೋಯ್ಡಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಗಂಡ ಮತ್ತು ನಪುಂಸಕತೆಯ ವಿಚಾರವನ್ನು ತಿಳಿಸದಕ್ಕೆ ಆತನ ಪೋಷಕರ ವಿರುದ್ಧ ದೂರು ಪತ್ನಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಮದುವೆಯ ವೆಚ್ಚವನ್ನೂ ಭರಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ದೂರಿನಲ್ಲಿ ಏನಿದೆ?
ಕೇಂದ್ರಿಯ ವಿಹಾರ್‍ನಲ್ಲಿ ನೆಲೆಸಿದ್ದ ವ್ಯಕ್ತಿಯ ಜೊತೆ 2015ರ ನವೆಂಬರ್‍ನಲ್ಲಿ ನನ್ನ ಮದುವೆ ನಡೆದಿತ್ತು. ಮದುವೆಯಾದ ಬಳಿಕ ನಾವಿಬ್ಬರೂ ಹನಿಮೂನ್‍ಗೆಂದು ಗೋವಾಕ್ಕೆ ತೆರಳಿದ್ವಿ. ಈ ಸಂದರ್ಭದಲ್ಲಿ ಗಂಡ ನಪುಂಸಕನಾಗಿರುವ ಬಗ್ಗೆ ಅನುಮಾನ ಮೂಡಿತ್ತು.

ಇದಾದ ಬಳಿಕ ನಾನು ವೈದ್ಯರ ಬಳಿ ಹೋಗಿ ಸಮಸ್ಯೆ ಬಗೆಹರಿಸಿ ಎಂದು ಸಲಹೆ ನೀಡಿದ್ದೆ. ಸಾಕಷ್ಟು ಬಾರಿ ನಾನು ಹೇಳಿದ್ದರೂ ಆತ ನನ್ನ ಸಲಹೆಯನ್ನು ತಿರಸ್ಕರಿಸಿದ್ದ.

ಮದುವೆಯಾದ ಆರಂಭದಲ್ಲಿ ಪತಿ ಬೆಳಗ್ಗೆ ಹೋಗಿ ಸಂಜೆ ಮನೆಗೆ ಬರುತ್ತಿದ್ದ. ಆದರೆ ನಾನು ಈ ವಿಚಾರವನ್ನು ಪ್ರಸ್ತಾಪ ಮಾಡಿದ ಬಳಿಕ ಆತ ತನ್ನ ಶಿಫ್ಟ್ ರಾತ್ರಿಗೆ ಬದಲಾಯಿಸಿದ. ಅಷ್ಟೇ ಅಲ್ಲದೇ ನನ್ನ ಜೊತೆ ಮಾತನಾಡದೇ ರಾತ್ರಿ ನಿದ್ದೆಗೆ ಜಾರುತ್ತಿದ್ದ.

ಗಂಡನ ದೌರ್ಬಲ್ಯದ ಬಗ್ಗೆ ನಾನು ಎರಡೂ ಕುಟುಂಬದರ ಜೊತೆ ಮಾತನಾಡಿದೆ. ಈ ಸಂದರ್ಭದಲ್ಲಿ ಪತಿ ನಾನು ವೈದ್ಯರನ್ನು ಭೇಟಿಯಾಗುತ್ತೇನೆ ಎಂದು ಭರವಸೆ ನೀಡಿದ್ದ. ತದನಂತರ ನಾನು ತವರು ಮನೆಗೆ ಹೋಗಿದ್ದೆ. ತವರು ಮನೆಯಿಂದ ಮರಳಿ ಅತ್ತೆ ಮನೆಗೆ ಬಂದಾಗಲೂ ಹಿಂದಿನಂತೆ ಗಂಡ ನಡೆದುಕೊಳ್ಳುತ್ತಿದ್ದ. ಇದರಿಂದ ಮನನೊಂದು ಪತಿ ಮತ್ತು ನಪುಂಸಕತೆಯನ್ನು ಮುಚ್ಚಿಟ್ಟದ್ದಕ್ಕೆ ಆತನ ಪೋಷಕರ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಐಪಿಸಿ 498ಎ(ವರದಕ್ಷಿಣಿ ಕಿರುಕುಳ) ಐಪಿಸಿ 420(ವಂಚನೆ) ಅಡಿ ಪ್ರಕರಣ ದಾಖಲಾಗಿದೆ. ದಂಪತಿಯನ್ನು ಕರೆದು ಮಾತುಕತೆ ನಡೆಸುತ್ತೇವೆ ಎಂದು ಮಹಿಳಾ ಸ್ಟೇಷನ್ ಹೌಸ್ ಆಫೀಸರ್ ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *