Connect with us

ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು

ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು

ಬೆಂಗಳೂರು: ‘ನನ್ನ ಗಂಡನಿಗೆ ಪುರುಷತ್ವ ಇಲ್ಲ’ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿಚಾರ ಮೊದಲೇ ಗೊತ್ತಿದ್ದರೂ ತನ್ನ ಮಾವ ಹಾಗೂ ಅತ್ತೆ ನನ್ನ ಜೊತೆ ಮದುವೆ ಮಾಡಿಸಿದ್ದರು. ಈ ಮೂಲಕ ಇವರೆಲ್ಲಾ ಸೇರಿ ನನಗೆ ಮೋಸ ಮಾಡಿದ್ದಾರೆ ಎಂದು ಮಹಿಳೆ ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?: 2014ರ ಜೂನ್ 5ರಂದು ನನಗೆ (ವಾಣಿ – ಹೆಸರು ಬದಲಿಸಲಾಗಿದೆ) ಎಡ್ವಿನ್ ಎಂಬಾತನ ಜೊತೆ ಮದುವೆ ಮಾಡಿಸಿದ್ದಾರೆ. ಮದುವೆ ಸಂದರ್ಭ ವರದಕ್ಷಿಣೆಯನ್ನೂ ನೀಡಿದ್ದೆವು.

ಮದುವೆಯಾದ ಫಸ್ಟ್ ನೈಟಲ್ಲೇ ಪತಿಗೆ ಪುರುಷತ್ವ ಇಲ್ಲ. ಒಬ್ಬ ಗಂಡಸಿಗೆ ಇರಬೇಕಾದ ಯಾವುದೇ ರೀತಿಯ ಭಾವನೆಗಳಾಗಲೀ, ಲಕ್ಷಣಗಳಾಗಲೀ ಇಲ್ಲ ಎಂದು ನನಗೆ ಗೊತ್ತಾಯಿತು. ಇದರಿಂದ ನಾನು ತೀವ್ರ ಆಘಾತಕ್ಕೆ ಒಳಗಾಗಿ, ಮಾನಸಿಕವಾಗಿ ನೊಂದಿದ್ದೇನೆ.

ನನ್ನ ಪತಿ ದುರ್ಬಲ ಎಂದು ಎಡ್ವಿನ್ ತಂದೆ ಆರೋಕ್ಯದಾಸ್ ಹಾಗೂ ತಾಯಿ ಸೆಲ್ವಿ ಅವರಿಗೆ ಗೊತ್ತಿತ್ತು. ಆದರೂ ಅವರು ಮದುವೆ ಮಾಡಿ ನನಗೆ ಮೋಸ ಮಾಡಿದ್ದಾರೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಮಾರ್ಚ್ 15ರಂದು ನೀಡಿರುವ ದೂರಿನಲ್ಲಿ ಮಹಿಳೆ ಮನವಿ ಮಾಡಿಕೊಂಡಿದ್ದಾರೆ.

 

Advertisement
Advertisement