ಮುಂಬೈ: ಪಾಪಿ ಮಾವನೊಬ್ಬ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಲ್ಲದೇ ಆಕೆಗೆ ಒತ್ತಾಯಪೂರ್ವಕವಾಗಿ ಕೋಳಿ ರಕ್ತ ಕುಡಿಸಿದ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.
33 ವರ್ಷದ ಮಹಿಳೆ ಮಾವ ಮತ್ತು ಪತಿಯ ವಿರುದ್ಧ ಮಾನಸಿಕ ಹಾಗೂ ದೈಹಿಕ ಕಿರುಕುಳ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಸ್ವೀಕರಿಸುವ ಪೊಲೀಸರು ಆರೋಪಿ ಮಾವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ವಯಂ ಘೋಷಿತ ದೇವಮಾನವ ನಿರ್ದೇಶನದಂತೆ ಮಹಿಳೆಗೆ ಆಕೆಯ ಮಾವ ಕೋಳಿ ರಕ್ತವನ್ನು ಒತ್ತಾಯಪೂರ್ವಕವಾಗಿ ಕುಡಿಸಿದ್ದಾನೆ.
ದೂರಿನಲ್ಲಿ ಮಹಿಳೆ, ನನ್ನ ಪತಿ ಶಕ್ತಿಹೀನನಾಗಿದ್ದು ಈ ವಿಚಾರವನ್ನು ಆತನ ತಂದೆ-ತಾಯಿ ನನ್ನ ಮುಂದೆ ಮುಚ್ಚಿಟ್ಟಿದ್ದಾರೆ. ಹೀಗಾಗಿ ಮಾವ ನನ್ನ ಮೇಲೆ ಬಲವಂತವಾಗಿ ಸೆಕ್ಸ್ ಮಾಡಿ ಗರ್ಭಿಣಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದನು. ಇನ್ನು ಪತಿಯ ಬಗ್ಗೆ ನಾನು ನನ್ನ ಸಂಬಂಧಿಕರ ಬಳಿಯೂ ಹೇಳಿಕೊಂಡಿದ್ದೆ. ಆ ಬಳಿಕ ನನ್ನ ಮೇಲೆ ಅತ್ತೆಯೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. 2018ರಿಂದ ಅಂದರೆ ಮದುವೆಯಾದಾಗಿನಿಂದಲೂ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರಲ್ಲಿ ಸಂತಾನೋತ್ಪತ್ತಿ ದರ ಕಡಿಮೆಯಾಗಿದೆ: ದಿಗ್ವಿಜಯ ಸಿಂಗ್
ಮಹಿಳೆ ಡಿಗ್ರಿ ಮುಗಿಸಿದ್ದು, ಪತಿ ಡಿಪ್ಲೋಮಾ ಎಂಜಿನಿಯರ್ ಪದವಿ ಪಡೆದಿದ್ದಾನೆ. ಇವರಿಬ್ಬರು 2018ರ ಡಿಸೆಂಬರ್ 30ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ 4 ತಿಂಗಳಿನಿಂದ ದಂಪತಿ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಸದ್ಯ ಮಹಿಳೆಯ ದೂರಿನ ಅನ್ವಯ ತನಿಖೆ ನಡೆಸುತ್ತಿದ್ದೇವೆ. ಅಲ್ಲದೆ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವುದಾಗಿ ಪೊಲಿಸ್ ಇನ್ಸ್ ಪೆಕ್ಟರ್ ಜಿತೇಂದ್ರ ಕದಂ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಜನ್ರಿಗೆ ಗುಡ್ ನ್ಯೂಸ್ – ಅ.1ರಿಂದ ಕಾರ್ಯನಿರ್ವಹಿಸಲಿರುವ ಹೊಂಜು ಗೋಪುರ