– ಇನ್ಸ್ಟಾದಲ್ಲಿ ರೀಲ್ಸ್ ನೋಡಿ ಕಾನ್ಸ್‌ಟೇಬಲ್ ಫಿದಾ, ಲವ್
ಬೆಂಗಳೂರು: ಎರಡನೇ ಗಂಡನನ್ನು ಬಿಟ್ಟು ಇನ್ಸ್ಟಾದಲ್ಲಿ ಪರಿಚಯವಾದ ಪೊಲೀಸ್ ಕಾನ್ಸ್‌ಟೇಬಲ್ (Police Constable) ಜೊತೆ ಮಹಿಳೆ ಪರಾರಿಯಾಗಿರುವ ಘಟನೆ ಬೆಂಗಳೂರಿನ (Bengaluru) ಚಂದ್ರಾಲೇಔಟ್‌ನಲ್ಲಿ (Chandra Layout) ನಡೆದಿದೆ.
ಚಂದ್ರಾಲೇಔಟ್ ನಿವಾಸಿ ಮೋನಿಕಾ ಹೆಚ್‌ಎಸ್‌ಆರ್ ಲೇಔಟ್ ಕಾನ್ಸ್‌ಟೇಬಲ್ ರಾಘವೇಂದ್ರ ಜೊತೆ ಪ್ರೀತಿಯಲ್ಲಿ ಬಿದ್ದು ಎರಡನೇ ಗಂಡನನ್ನು ಬಿಟ್ಟು ಪರಾರಿಯಾಗಿದ್ದಾಳೆ. ಮದುವೆಯಾಗಿ ಮಗು ಇರುವ ಕಾನ್ಸ್‌ಟೇಬಲ್ ರಾಘವೇಂದ್ರ ಇನ್ಸ್ಟಾದಲ್ಲಿ ಮೋನಿಕಾಳ ರೀಲ್ಸ್ ನೋಡಿ ಫಿದಾ ಆಗಿದ್ದ. ರೀಲ್ಸ್ ನೋಡಿದ ತಕ್ಷಣ ಆಕೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಮೊದಲ ಗಂಡನನ್ನು ಬಿಟ್ಟು ಎರಡನೇ ಗಂಡನ ಜೊತೆಗಿದ್ದ ಮೋನಿಕಾ ಕಾನ್ಸ್‌ಟೇಬಲ್ ರಾಘವೇಂದ್ರನ ರಿಕ್ವೆಸ್ಟ್ ನೋಡಿ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದಳು. ಪರಿಣಾಮ, ಕೆಲವೇ ದಿನಗಳಲ್ಲಿ ಪರಿಚಯ ಪ್ರೀತಿಯಾಗಿ ಇಬ್ಬರು ಜೊತೆ ಜೊತೆಗೆ ತಿರುಗಾಡಲು ಶುರುಮಾಡಿದ್ದರು. ಅಷ್ಟೇ ಅಲ್ಲದೇ ಇಬ್ಬರೂ ಜೊತೆಯಲ್ಲಿ ಹಲವು ರೀಲ್ಸ್ ಕೂಡ ಮಾಡಲು ಶುರು ಮಾಡಿದ್ದರು. ಇದನ್ನೂ ಓದಿ: ವಿಮಾನದಲ್ಲೇ ಚಿಕಿತ್ಸೆ ನೀಡಿ ಅಮೆರಿಕ ಯುವತಿಯ ಜೀವ ಉಳಿಸಿದ ಅಂಜಲಿ ನಿಂಬಾಳ್ಕರ್
ಹೀಗೆ ರೀಲ್ಸ್ ಮಾಡಿಕೊಂಡೇ ಇದ್ದರೆ ಆಗಲ್ಲ ಅಂತಾ ಡಿಸೈಡ್ ಮಾಡಿದ ಇವರಿಬ್ಬರು ಮನೆಬಿಟ್ಟು ಓಡಿಹೋಗೋಕೆ ನಿರ್ಧಾರ ಮಾಡಿದ್ರು. ಅದರಂತೆ, ಕಾನ್ಸ್‌ಟೇಬಲ್ ರಾಘವೇಂದ್ರ, ಪತ್ನಿ, ಮಗುವನ್ನು ಬಿಟ್ಟು ಮೋನಿಕಾ ಜೊತೆ ಎಸ್ಕೇಪ್ ಆಗಿದ್ದಾನೆ. ಇತ್ತ ಮೋನಿಕಾ ಕೂಡ ಎರಡನೇ ಗಂಡನನ್ನು ಬಿಟ್ಟು ರಾಘವೇಂದ್ರನ ಜೊತೆ ಪರಾರಿಯಾಗಿದ್ದಾಳೆ. ಇದನ್ನೂ ಓದಿ: ಮಡಿಕೇರಿಯಲ್ಲಿ ಮಂಡ್ಯದ ಯುವಕನಿಗೆ ಹನಿಟ್ರ್ಯಾಪ್ ಆರೋಪ – ಹೋಂ ಸ್ಟೇಗೆ ಕರೆಸಿಕೊಂಡು ಹಣಕ್ಕೆ ಡಿಮ್ಯಾಂಡ್
ಇಷ್ಟು ಮಾತ್ರವಲ್ಲದೇ ಮೋನಿಕಾ ಮನೆಬಿಟ್ಟು ಹೋಗುವಾಗ ಮನೆಯಲ್ಲಿದ್ದ 160 ಗ್ರಾಂ ಚಿನ್ನಾಭರಣ, 1.80 ಲಕ್ಷ ದುಡ್ಡು ತೆಗೆದುಕೊಂಡು ಎಸ್ಕೇಪ್ ಆಗಿದ್ದಾಳೆ. ಈ ವಿಚಾರ ತಿಳಿದ ಮೋನಿಕಾ ಪತಿ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಹೆಚ್‌ಎಸ್‌ಆರ್ ಲೇಔಟ್ ಕಾನ್ಸ್‌ಟೇಬಲ್ ರಾಘವೇಂದ್ರ ಮತ್ತು ಮೋನಿಕಾಳ ರೀಲ್ಸ್ ಪುರಾಣದ ಕಥೆ ಗೊತ್ತಾಗಿ ಮೇಲಾಧಿಕಾರಿಗೆ ವಿಚಾರ ಮುಟ್ಟಿಸಿದ್ದಾರೆ. ಈ ಪರಿಣಾಮ ಕಾನ್ಸ್‌ಟೇಬಲ್ ರಾಘವೇಂದ್ರನನ್ನ ಅಮಾನತು ಮಾಡಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಜನವರಿಯಲ್ಲಿ ದರ್ಶನ್ ಅಣ್ಣನಿಗೆ ಬೇಲ್ ಸಿಗುವ ನಿರೀಕ್ಷೆಯಿದೆ – ಜಮೀರ್ ಪುತ್ರ ಝೈದ್ ಖಾನ್

