ತಿರುವನಂತಪುರಂ: ಮದುವೆಯಾದ ಮರುದಿನವೇ ಮಹಿಳೆಯೊಬ್ಬರು ತನ್ನ ಗರ್ಲ್ಫ್ರೆಂಡ್ ಜೊತೆ ಪರಾರಿಯಾಗಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.
ಮಹಿಳೆ ತಾನು ಮದುವೆಯಾದ ಮರುದಿನವೇ ಗಂಡನ ಮನೆಯಿಂದ ನಾಪತ್ತೆಯಾಗಿದ್ದಾಳೆ. ಹೆಂಡತಿ ಕಾಣದ ಕಾರಣ ಆಕೆಯ ಗಂಡನಿಗೆ ಹೃದಯಾಘಾತ ಉಂಟಾಗಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ರಿಶೂರ್ನ ಪಝುವಿಲ್ನ 23 ವರ್ಷದ ಮಹಿಳೆ ಹೀಗೆ ತನ್ನ ಗೆಳತಿಯೊಂದಿಗೆ ಪರಾರಿಯಾದಾಕೆ ಆಗಿದ್ದಾಳೆ. ಹೆಂಡತಿ ಪರಾರಿಯಾಗಿರುವ ಬಗ್ಗೆ ಆಕೆಯ ಗಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಆರು ದಿನ ತನಿಖೆ ಮಾಡಿದ ಪೊಲೀಸರಿಗೆ ಆಕೆ ತನ್ನ ಗೆಳತಿಯೊಂದಿಗೆ ಓಡಿ ಹೋದ ಘಟನೆ ಬೆಳಕಿಗೆ ಬಂದಿದೆ.
Advertisement
Advertisement
ಮದುವೆಯಾದ ಮಾರನೇ ದಿನ ಬ್ಯಾಂಕ್ಗೆ ಹೋಗಿದ್ದ ಆಕೆ ಗಂಡನ ಮೊಬೈಲ್ ತೆಗೆದುಕೊಂಡು ನನ್ನ ಗೆಳತಿಯನ್ನು ಭೇಟಿ ಮಾಡಿ ವಾಪಾಸ್ ಬರುತ್ತೇನೆ ಎಂದು ಹೇಳಿ ಹೋಗಿದ್ದಳು. ಆದರೆ ಬೈಕ್ನಲ್ಲಿ ಹೋದ ಆಕೆ ಮತ್ತೆ ವಾಪಾಸ್ ಬರಲೇ ಇಲ್ಲ. ಆಗ ಆಕೆಯ ಪತಿ ಪೊಲೀಸ್ ಠಾಣೆಯಲ್ಲಿ ತನ್ನ ಹೆಂಡತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಇದನ್ನೂ ಓದಿ: ನ.16ಕ್ಕೆ ಪ್ಯಾಲೇಸ್ ಗ್ರೌಂಡ್ನಲ್ಲಿ ಪವರ್ ಸ್ಟಾರ್ಗೆ ನುಡಿ ನಮನ
Advertisement
Advertisement
ತ್ರಿಶೂರ್ನಿಂದ ತನ್ನ ಗೆಳತಿಯೊಂದಿಗೆ ಪರಾರಿಯಾಗುವುದಕ್ಕೆ ಆ ಮಹಿಳೆ ಚೆನ್ನೈಗೆ ರೈಲು ಟಿಕೆಟ್ ಬುಕ್ ಮಾಡಿದ್ದರು. ಆದರೆ ಸಿಕ್ಕಿ ಬೀಳುತ್ತೇವೆಂಬ ಭಯದಿಂದ ಅವರಿಬ್ಬರೂ ಬಸ್ ಮೂಲಕ ಕೊಟ್ಟಾಯಂಗೆ ಹೋಗಿ ಅಲ್ಲಿಂದ ಚೆನ್ನೈಗೆ ರೈಲಿನಲ್ಲಿ ಹೋಗಿದ್ದರು. ಅಲ್ಲಿಂದ ಹೋಟೆಲ್ನಲ್ಲಿ ರೂಂ ಬುಕ್ ಮಾಡಿಕೊಂಡು ಇದ್ದರು. ಅಂದಹಾಗೆ ವಿಚಿತ್ರವೆಂದರೆ ಇನ್ನೊಬ್ಬ ಮಹಿಳೆ ಕೂಡ ಕೆಲವೇ ದಿನಗಳ ಹಿಂದಷ್ಟೆ ಮದುವೆಯಾಗಿದ್ದಳು. ಇಬ್ಬರೂ ನವವಿವಾಹಿತೆಯರು ಮದುವೆಗೆ ತಮಗೆ ಹಾಕಿದ್ದ ಚಿನ್ನಾಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದರು. ಅವರನ್ನು ಮಧುರೈನಲ್ಲಿ ಪತ್ತೆಹಚ್ಚಲಾಗಿದೆ. ಆ ಮಹಿಳೆಯನ್ನು ಹುಡುಕಿ ಗಂಡನ ಮನೆಗೆ ಸೇರಿಸಲಾಗಿದೆ.
ಮದುವೆಗೆ ಮೊದಲೇ ತನ್ನ ಗೆಳತಿಯೊಂದಿಗೆ ಓಡಿಹೋಗಲು ಬಯಸಿದ್ದಳು. ಆದರೆ ಮನೆಯಲ್ಲಿ ತನ್ನ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಓಡಿಹೋಗಲು ನಿರ್ಧರಿಸಿದ್ದ ಆಕೆ ಅದಕ್ಕಾಗಿಯೇ ಮದುವೆಯಾಗಿದ್ದಳು ಎನ್ನಲಾಗಿದೆ.