ಲಕ್ನೋ: ಕಾರಿನಲ್ಲಿ ಬಂದ ತಾಯಿಯೊಬ್ಬಳು ತನ್ನ ಮಗುವನ್ನು ಅಪರಿಚಿತರ ಮನೆಯ ಮುಂದೆ ಬಿಟ್ಟು ಹೋದ ಅಮಾನವೀಯ ಘಟನೆ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ. ಈ ಎಲ್ಲ ದೃಶ್ಯಗಳು ಸ್ಥಳೀಯ ಕಟ್ಟಡವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಹಾಡು ಹಗಲೇ ನವಜಾತ ಹೆಣ್ಣು ಮಗುವನ್ನು ಬೇರೆಯೊಬ್ಬರ ಮನೆ ಬಳಿ ಬಿಟ್ಟು ಹೋಗಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರೊಂದು ಇಕ್ಕಟ್ಟಾದ ಗಲ್ಲಿಯಲ್ಲಿ ಬಂದಿದ್ದು, ಅದರಲ್ಲಿದ್ದ ಮಹಿಳೆಯೊಬ್ಬಳು ಕೆಂಪು ಬಟ್ಟೆಯಲ್ಲಿ ಸುತ್ತಿದ್ದ ಹಸುಳೆಯನ್ನು ಹಿಡಿದು, ಒಂದು ಮನೆಯ ಮುಂದೆ ಇರಿಸಿ ಹೋಗಿದ್ದಾಳೆ. ಇದನ್ನು ಓದಿ: ಆಸ್ಪತ್ರೆಯಲ್ಲಿ ಮಗುಬಿಟ್ಟು ಕರುಳಬಳ್ಳಿ ಕಡಿದುಕೊಂಡಳು!
#WATCH An unidentified woman drops a new-born baby on a street from a car in Muzaffarnagar. CMO Muzaffarnagar says, "the new-born is under treatment but her condition remains critical. We are hopeful of her recovery." (Source:CCTV footage) pic.twitter.com/Q6gyEAo6Q6
— ANI UP/Uttarakhand (@ANINewsUP) June 6, 2018
ಸ್ವಲ್ಪ ಸಮಯದ ನಂತರ ಮಗುವನ್ನು ನೋಡಿದ ಜನರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಪ್ರಾಣಾಪಾಯಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಾವು ಮಗುವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿ ಹೇಳಿದ್ದಾರೆ.
ಇತ್ತೀಚೆಗೆ ಧಾರವಾಡ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಮಹಿಳೆಯೊಬ್ಬಳು ತನ್ನ ಎರಡು ತಿಂಗಳ ಮಗುವನ್ನು ಬಿಟ್ಟು ಹೋಗಿದ್ದಳು.