ಪಾಟ್ನಾ: ವೈದ್ಯೆಯೊಬ್ಬರು ತನ್ನ ಪ್ರಿಯತಮನ ಮರ್ಮಾಂಗವನ್ನೇ ಕತ್ತರಿಸಿದ ಅಮಾನವೀಯ ಘಟನೆಯೊಂದು ಬಿಹಾರದ (Bihar) ಸರನ್ ಜಿಲ್ಲೆಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ವೈದ್ಯೆಯನ್ನು (Woman Doctor) ಬಂಧಿಸಲಾಗಿದೆ. ವಿಚಾರಣೆಯ ವೇಳೆ ಆಕೆ ಪ್ರಿಯಕರ ತನಗೆ ಅನ್ಯಾಯ ಮಾಡಿದ್ದರಿಂದ ನಾನು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾಳೆ. ಘಟನೆಯ 2 ವೀಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ವೀಡಿಯೋದಲ್ಲಿ ವೈದ್ಯೆ, ಆತ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ಮೂರು ಬಾರಿ ನಾನು ಗರ್ಭಪಾತಕ್ಕೆ ಒಳಗಾಗಬೇಕಾಯಿತು ಎಂದು ಹೇಳಿದ್ದಾಳೆ. ಅಲ್ಲದೇ ಮರ್ಮಾಂಗ ಕತ್ತರಿಸಿದ್ದು ಯಾಕೆ ಎಂದು ಕೇಳಿದಾಗ, ಅವನು ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಕೋಪದಲ್ಲಿ ಈ ಕೃತ್ಯ ಎಸಗಿದ್ದೇನೆ. ಸಾಯಿಸಬೇಕು ಎಂದು ಮಾಡಿಲ್ಲ. ಅಲ್ಲದೇ ಮುಂದೆ ಬೇರೆ ಯಾವುದೇ ಯುವತಿಗೂ ಇಂತಹ ದ್ರೋಹ ಅವನು ಎಸಗಬಾರದು ಎಂದು ನಾನು ಬಯಸುತ್ತೇನೆ ಎಂದು ಹೇಳುತ್ತಿರುವುದನ್ನು ಗಮನಿಸಬಹುದು.
महिला डॉक्टर प्रेमिका ने अपने प्रेमी का काट दिया गुप्तांग काफी समय से शादी के नाम पर दे रहा था धोखा
प्रेमिका ने अपने प्रेमी का गुप्तांग काटकर टॉयलेट में फ्लश कर दिया
बिहार के सारण जिले के में एक नर्सिंग होम संचालिका ने अपने वार्ड पार्षद प्रेमी का प्राइवेट पार्ट काट दिया pic.twitter.com/tArloSkels
— Arjun Chaudharyy (@Arjunpchaudhary) July 3, 2024
ಇನ್ನೊಂದು ವೀಡಿಯೋದಲ್ಲಿ ವೈದ್ಯೆ ಹಾಗೂ ಸಂತ್ರಸ್ತ ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ನೋವಿನಿಂದ ಅಳುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಮಗುವಿಗೆ ಔಷಧಿ ತರಲು ತೆರಳಿದ್ದ ಮಹಿಳೆಯನ್ನು ನುಂಗಿದ ಹೆಬ್ಬಾವು!
ವೈದ್ಯೆ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ದಲ್ಲದೇ ಬಳಿಕ ಶೌಚಾಲಯದಲ್ಲಿ ಫ್ಲಶ್ ಮಾಡಿದ್ದಾಳೆ. ಸಂತ್ರಸ್ತ ಮಧುರಾ ಬ್ಲಾಕ್‌ನ ವಾರ್ಡ್ ನಂ.12ರ ಕೌನ್ಸಿಲರ್ ಆಗಿದ್ದು, ಸದ್ಯ ಪಾಟ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (PMCH) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.