ಮುಂಬೈ: ಇಲ್ಲಿನ ಆಸ್ಪತ್ರೆಯಲ್ಲಿ ಪಾನಮತ್ತ ರೋಗಿ ಮತ್ತು ಆತನ ಸಂಬಂಧಿಕರು ಮಹಿಳಾ ವೈದ್ಯೆ (Doctor) ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಭಾನುವಾರ ಬೆಳಗ್ಗೆ ಮುಂಬೈನ (Mumbai) ಸಿಯಾನ್ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆ ಮೇಲೆ ಹಲ್ಲೆ ನಡೆದಿದೆ. ಮುಂಜಾನೆ 3:30 ರ ಸುಮಾರಿಗೆ ವೈದ್ಯರು ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಸ್ಪತ್ರೆಯಲ್ಲಿ ದಾಳಿ ನಡೆದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರಿಗೆ ಜಾತ್ಯತೀತ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ: ಮುಸ್ಲಿಂ ಮಂಡಳಿ
Advertisement
Advertisement
ಹಲ್ಲೆ ನಡೆಸಿದ ಆರೋಪಿ ರೋಗಿಗೆ ಮುಖದ ಮೇಲೆ ಗಾಯವಾಗಿತ್ತು. ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ. ಈ ವೇಳೆ ವೈದ್ಯೆಯನ್ನು ರೋಗಿ ಮತ್ತು ಆತನ ಸಂಬಂಧಿಕರು ನಿಂದಿಸಿದ್ದಾರೆ. ನಂತರ ರೋಗಿಯೊಂದಿಗೆ 5-6 ಕುಡುಕರ ಗುಂಪು ವೈದ್ಯೆ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
Advertisement
ಇಂದು ಮುಂಜಾನೆ ಘಟನೆ ನಡೆದಿದ್ದು, ರೋಗಿಯೊಬ್ಬರು ಹಾಗೂ ಆತನ ಸಂಬಂಧಿಕರು ಕುಡಿದ ಅಮಲಿನಲ್ಲಿ ಆಸ್ಪತ್ರೆಗೆ ಆಗಮಿಸಿ ಅಲ್ಲಿನ ಮಹಿಳಾ ವೈದ್ಯೆಯೊಂದಿಗೆ ಜಗಳವಾಡಿದ್ದಾರೆ. ಇದು ಆತಂಕಕಾರಿ ಘಟನೆಯಾಗಿದೆ ಎಂದು BMC MARD ಮುಖ್ಯಸ್ಥ ಡಾ. ಅಕ್ಷಯ್ ಮೋರ್ ಬೇಸರ ಹೊರಹಾಕಿದ್ದಾರೆ.
Advertisement
ನಂತರ ರೋಗಿ ಮತ್ತು ಆತನ ಕುಟುಂಬಸ್ಥರು ಸ್ಥಳದಿಂದ ಪರಾರಿಯಾಗಿದ್ದಾರೆ. ವೈದ್ಯರು ಸಯೋನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆ ಹತ್ಯಾಚಾರ; ನೈಟ್ ಶಿಫ್ಟ್ ಮಹಿಳೆಯರ ಸುರಕ್ಷತೆಗಾಗಿ ಪಶ್ಚಿಮ ಬಂಗಾಳ ಸರ್ಕಾರದಿಂದ 5 ಕ್ರಮ