ಚಿಕ್ಕಮಗಳೂರು: ಮದವೇರಿದ್ದ ಕಾಡಾನೆಗೆ (Elephant) ಮಹಿಳೆ (Woman) ಬಲಿಯಾದ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಡೆದಿದೆ. ಇದೇ ಜಾಗದಲ್ಲಿ ಈ ಆನೆ ವಾರದ ಹಿಂದೆ ಕಾರ್ಮಿಕನೊಬ್ಬನನ್ನು ಬಲಿಪಡೆದಿತ್ತು.
ಮೃತ ಮಹಿಳೆಯನ್ನು ಹಾವೇರಿಯ ಹಾನಗಲ್ ಮೂಲದ ಬೋರಮ್ಮ (33) ಎಂದು ಗುರುತಿಸಲಾಗಿದೆ. ಕಾಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿರುವ ಸಮಯದಲ್ಲೇ ಈ ದಾಳಿ ನಡೆದಿದೆ. ಕಾಡಾನೆಗೆ ಮದವೇರಿದೆ ಎಂದು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಆನೆ ದಾಳಿ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ತೋಟದಲ್ಲಿ ಹೋಗ್ತಿದ್ದ ಕಾರ್ಮಿಕನನ್ನು ಕೊಂದು ಹಾಕಿದ ಕಾಡಾನೆ
ಮಹಿಳೆಯ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಕೊಂಡೊಯ್ದರೆ ಜನರಿಗೆ ತಿಳಿಯುತ್ತದೆ ಎಂದು ಗೂಡ್ಸ್ ಆಟೋದಲ್ಲಿ ಸಾಗಿಸಿದ್ದಾರೆ. ಈ ವಿಚಾರಕ್ಕೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೇಲಿಂದ ಮೇಲೆ ಸಾವಾಗ್ತಿದ್ರು ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ. ಕಾಡಾನೆ ದಾಳಿಗೆ 9 ಜನ ಬಲಿಯಾಗಿದ್ದಾರೆ. ಸತ್ತ ಬಳಿಕ ಪರಿಹಾರ ಶಾಶ್ವತವಲ್ಲ, ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾಡಾನೆ ಸೆರೆಗೆ ಬಂದಿದ್ದ ಜ್ಯೂ.ಅರ್ಜುನ ನಾಪತ್ತೆ – ಮದಗಜದ ಆರ್ಭಟಕ್ಕೆ ಕಾಡು ಸೇರಿದ ʻಪಾರ್ಥʼ!

