ಗ್ಯಾಸ್ ಗೀಸರ್ ಲೀಕ್‍ನಿಂದ ಪತ್ನಿ ಸಾವು ಎಂದ ಪತಿ- ಕೊಲೆ ಆರೋಪ

Public TV
1 Min Read
KOLAR

ಕೋಲಾರ: ಮಹಿಳೆಯೊಬ್ಬಳು ಇಲ್ಲಿನ ಮಿಲ್ಲತ್ ನಗರದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ವರದಕ್ಷಿಣೆ (Dowry) ಕಿರುಕುಳಕ್ಕೆ ಬಲಿಯಾದ ಅನುಮಾನ ವ್ಯಕ್ತವಾಗಿದೆ.

ಮೃತಳನ್ನು ಮಿಲ್ಲತ್ ನಗರದ ಮಾಹೇನೂರ್ (22) ಎಂದು ಗುರುತಿಸಲಾಗಿದೆ. ಆಕೆಯ ಪತಿ ಸಯ್ಯದ್ ಶುಹೇಬ್ ಎಂಬಾತ ಕೊಲೆ ಮಾಡಿ ಗ್ಯಾಸ್ ಗೀಸರ್ ಲೀಕ್‍ನಿಂದ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾನೆ. ಅಲ್ಲದೇ ಆತ ಕಳೆದ ಕೆಲವು ತಿಂಗಳುಗಳಿಂದ ಹಣ, ಜಾಗ ಹಾಗೂ ಬುಲೆಟ್ ಬೈಕ್‍ಗಾಗಿ ಪತ್ನಿಯ ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ನಾಲ್ವರ ಕೊಲೆ ಆರೋಪಿ ಪ್ರವೀಣ್ ಚೌಗುಲೆಗೆ ನ್ಯಾಯಾಂಗ ಬಂಧನ

ಈಗಾಗಲೇ ಮೂರು ಬಾರಿ ನ್ಯಾಯ ಪಂಚಾಯ್ತಿ ಮಾಡಿದ್ದೇವೆ. ಇಂದು ಮುಂಜಾನೆ ಸಹ ಮೃತ ಮಹಿಳೆ ಕರೆ ಮಾಡಿ ಪತಿ ಹಣ ತರುವಂತೆ ಪೀಡಿಸುತ್ತಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಇದರಿಂದ ಗಲಾಟೆ ಮಾಡಿ ಮಹಿಳೆಯ ಹತ್ಯೆ ಮಾಡಲಾಗಿದೆ ಎಂದು ಸಂಬಂಧಿಕರು ಹೇಳಿಕೊಂಡಿದ್ದಾರೆ.

ಈ ಸಂಬಂಧ ಗಲ್ ಪೇಟೆ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸಯ್ಯದ್ ಶುಹೇಬ್‍ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಫೈನಲ್‌ ನೋಡುವಾಗ ಟಿವಿ ಸ್ವಿಚ್‌ ಆಫ್‌ – ಸಿಟ್ಟಾಗಿ ತಂದೆಯಿಂದಲೇ ಮಗನ ಕೊಲೆ

Share This Article