ಬೆಂಗಳೂರು: ರಾಜ್ಯದ ಹಲವೆಡೆ ಡೆಂಗ್ಯೂ ನರ್ತನ ಜೋರಾಗಿದೆ. ಸಣ್ಣ ಪ್ರಮಾಣದ ಮಳೆಯಿಂದ ರಾಜಧಾನಿ ಬೆಂಗಳೂರು, ದಾವಣಗೆರೆ ಹಾಗೂ ಮಂಡ್ಯದ ಜಿಲ್ಲೆಗಳಲ್ಲೂ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದೆ.
Advertisement
ದಾವಣಗೆರೆ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವೆಡೆ ಡೆಂಗ್ಯೂ ಮಹಾಮಾರಿ ಮತ್ತೆ ತಾಂಡವ ಆಡ್ತಿದೆ. ಸಿಲಿಕಾನ್ ಸಿಟಿಯಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ಚೌಡರಪಾಳ್ಯದಲ್ಲಿ 32 ವರ್ಷದ ಕಲಾವತಿ ಎಂಬಾಕೆ ಬಲಿಯಾಗಿದ್ದಾರೆ. ಕಳೆದ ಎರಡು ದಿನದಿಂದ ಜ್ವರದಿಂದ ಬಳಲ್ತಿದ್ದ ಕಲಾ, ಚಿಕಿತ್ಸೆ ಫಲಿಸದೇ ಮಾಗಡಿ ರಸ್ತೆಯ ಸ್ಪೈನ್‍ಕೇರ್ ಮತ್ತು ಆರ್ಥೋಕೇರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Advertisement
ಡೆಂಗ್ಯೂ ಅಷ್ಟೇ ಅಲ್ಲ. ರಾಜ್ಯಾದ್ಯಂತ ಚಿಕೂನ್ ಗುನ್ಯಾ ಅಬ್ಬರ ಕೂಡಾ ಜೋರಾಗಿದೆ. ಸ್ವತಃ ಆರೋಗ್ಯ ಸಚಿವ ರಮೇಶ್ ಕುಮಾರ್ ಈ ಬಗ್ಗೆ ಕಳವಳ ಹಾಗೂ ಭಯ ವ್ಯಕ್ತಪಡಿಸಿದ್ದಾರೆ.
Advertisement
Advertisement
ರಾಜ್ಯಾದ್ಯಂತ ಎಷ್ಟು ಪ್ರಕರಣ ಕಂಡುಬಂದಿದೆ ನೋಡೋದಾದ್ರೆ:
ಬೆಂಗಳೂರು – 7 ತಿಂಗಳಲ್ಲಿ 1,106 ಕೇಸ್
14 ಜನರಿಗೆ ಚಿಕೂನ್ ಗೂನ್ಯಾ
ರಾಜ್ಯಾದ್ಯಂತ 2053 ಡೆಂಗ್ಯೂ ಪ್ರಕರಣ
ರಾಜ್ಯದಲ್ಲಿ 143 ಜನರಲ್ಲಿ ಚಿಕೂನ್ ಗೂನ್ಯಾ
ದಾವಣಗೆರೆ, ಹರಿಹರ, ಜಗಳೂರು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿವೆ. ದಾವಣಗೆರೆ ಜಿಲ್ಲಾಸ್ಪತ್ರೆಯೊಂದರಲ್ಲೇ ಏಪ್ರಿಲ್, ಮೇನಲ್ಲಿ 20 ಇದ್ದ ಪ್ರಕರಣಗಳು, ಜೂನ್‍ನಲ್ಲಿ ನಾಲ್ಕೈದು ಪಟ್ಟು ಹೆಚ್ಚಾಗಿವೆ.
ದಾವಣಗೆರೆ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಮಾಣ ಎಷ್ಟಿದೆ ಅಂತಾ ನೋಡೋದಾದ್ರೆ:
2016 ಜನವರಿಯಿಂದ ಡಿಸೆಂಬರ್: ಶಂಕಿತ ಪ್ರಕರಣ – 2002, ದೃಢಪಟ್ಟ ಪ್ರಕರಣ – 446
2017 – ಜನವರಿಯಿಂದ ಜೂನ್ 27: ಶಂಕಿತ ಪ್ರಕರಣ – 922, ದೃಢಪಟ್ಟ ಪ್ರಕರಣ – 146
ವಿಶ್ವಸಂಸ್ಥೆ ಸೂಚನೆ ಪ್ರಕಾರ ಡೆಂಗ್ಯೂ ಪತ್ತೆಗೆ ಎನ್‍ಎಸ್‍ಐ, ಐಜಿಪಿ, ಐಜಿಎಂ (ನ್ಯಾಕ್ ಎಲೈಜಾ) ಮೊದಲಾದ ಪರೀಕ್ಷೆಗಳನ್ನು ಮಾಡಬೇಕು. ಆದ್ರೆ ಅದೂ ನಡೆಯುತ್ತಿಲ್ಲ. ಖಾಸಗಿ ಲ್ಯಾಬ್‍ಗಳು ಅವೈಜ್ಞಾನಿಕವಾಗಿ ಪರೀಕ್ಷೆ ನಡೆಸುತ್ತಿವೆ ಅನ್ನೋ ಆರೋಪಗಳು ಕೂಡ ಕೇಳಿ ಬರುತ್ತಿವೆ. ಕೆಲವೆಡೆ ಡೆಂಗ್ಯೂನಾ? ಮಲೇರಿಯಾನಾ? ಅಥವಾ ಇನ್ಯಾವುದೋ ಕಾಯಿಲೆ ಅನ್ನೋದನ್ನ ಖಚಿತಪಡಿಸಲು ವೈದ್ಯರಿಗೆ ಆಗುತ್ತಿಲ್ಲ.
ಒಟ್ಟಿನಲ್ಲಿ ಜನರೇ ಹುಷಾರಾಗಿರಿ. ಮೈ ಕೈ ನೋವು, ಜ್ವರ, ಮೈ ಮೇಲೆ ಕೆಂಪು ಹಚ್ಚೆ ಮೂಡಿದ್ರೆ ಇವೆಲ್ಲಾ ಡೆಂಗ್ಯೂ ಲಕ್ಷಣಗಳು. ಯಾವುದಕ್ಕೂ ಆಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ. ಜೊತೆಗೆ ಮರೆಯದೇ ಸೊಳ್ಳೆ ಪರದೆ ಬಳಸಿ.