ಬೆಂಗಳೂರು: ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್‌ಗೆ (Paint Mixer) ಕೂದಲು (Hair) ಸಿಲುಕಿ ಮಹಿಳೆ (Woman) ದಾರುಣವಾಗಿ ಸಾವನ್ನಪ್ಪಿದ ಘಟನೆ ನೆಲಗದರನಹಳ್ಳಿಯ ಕಾರ್ಖಾನೆಯೊಂದರಲ್ಲಿ (Factory) ನಡೆದಿದೆ.
ಶ್ವೇತಾ (34) ಸಾವನ್ನಪ್ಪಿದ ಮಹಿಳೆ. ಗಂಡ ಮತ್ತು ಮಗನ ಜೊತೆ ಶ್ವೇತಾ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಬಣ್ಣ ಬೆರೆಸುವ ಮಿಕ್ಸರ್‌ಗೆ ಜಡೆ ಸಿಲುಕಿ ಘಟನೆ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೌಡಿಶೀಟರ್ ಬರ್ಬರ ಹತ್ಯೆ
ಬಣ್ಣ ಗಟ್ಟಿಯಾಗುತ್ತಿದ್ದರಿಂದ ಪರಿಶೀಲಿಸಲು ಮಿಕ್ಸರ್ ಬಳಿ ಬಂದು ಬಗ್ಗಿದಾಗ ಈ ಅವಘಡ ಸಂಭವಿಸಿದೆ. ಜಡೆ ಸಿಲುಕಿದಾಗ ಮಹಿಳೆ ಕೂಗಿಕೊಂಡರೂ ಮಿಕ್ಸರ್ ಶಬ್ದದಿಂದಾಗಿ ಯಾರಿಗೂ ಕೇಳಿಸಿಲ್ಲ. ಬಳಿಕ ಉಳಿದ ಕೆಲಸಗಾರರು ಮಿಕ್ಸರ್ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೀಣ್ಯ (Peenya) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್ – ನಾಪತ್ತೆಯಾಗಿದ್ದ ನಿವೃತ್ತ ಯೋಧನ ಮೃತದೇಹ ಪಂಪಿನ ಕೆರೆಯಲ್ಲಿ ಪತ್ತೆ