ನೂತನ ಪೊಲೀಸ್ ಕ್ವಾರ್ಟರ್ಸ್ ನಿಂದ ಬಿದ್ದು ಮಹಿಳೆ ದುರ್ಮರಣ

Public TV
0 Min Read
MNG DEATH

ಮಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳೂರಿನ ಪೊಲೀಸ್ ಲೇನ್ ನಲ್ಲಿ ನಡೆದಿದೆ.

ಗದಗ ಜಿಲ್ಲೆಯ ಗಜೇಂದ್ರಗಢ ನಿವಾಸಿ ಚಿನ್ನಮ್ಮ(27) ಮೃತ ದುರ್ದೈವಿ. ಮಂಗಳೂರಿನ ಪಾಂಡೇಶ್ವರ ಬಳಿಯ ಪೊಲೀಸ್ ಲೇನ್ ನಲ್ಲಿ ಪೊಲೀಸರಿಗೆ ನೂತನ  ಕ್ವಾರ್ಟರ್ಸ್ ನಿರ್ಮಾಣವಾಗುತ್ತಿತ್ತು. ಈ ಕಟ್ಟಡದ ಏಳನೇ ಮಹಡಿಯಿಂದ ಚಿನ್ನಮ್ಮ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಚಿನ್ನಮ್ಮ ಏಳನೇ ಅಂತಸ್ತಿನಲ್ಲಿ ಸಿಮೆಂಟ್ ಹಚ್ಚಿದ ಗೋಡೆಗೆ ನೀರು ಸಿಂಪಡಿಸುತ್ತಿದ್ದ ವೇಳೆ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕಳೆದ ಕೆಲ ವರ್ಷಗಳಿಂದ ಚಿನ್ನಮ್ಮ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಈ ಘಟನೆಯ ಬಗ್ಗೆ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *