ಲಕ್ನೋ: ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯರ ಸಮ್ಮುಖದಲ್ಲೇ ಮಹಿಳೆಯ ಬಾಯಿ ಸ್ಫೋಟಗೊಂಡು, ಸಾವನ್ನಪ್ಪಿರುವ ಪ್ರಕರಣ ವೈದ್ಯಕೀಯ ಲೋಕವನ್ನೇ ತಲ್ಲಣಗೊಳಿಸಿದೆ.
ಉತ್ತರ ಪ್ರದೇಶದ ಅಲಿಗಢ್ ಜೆಎನ್ ಮೆಡಿಕಲ್ ಆಸ್ಪತ್ರೆಯಲ್ಲಿ ಬುಧವಾರ ಇಂತಹದೊಂದು ವಿಚಿತ್ರ ಪ್ರಕರಣ ನಡೆದಿದೆ. ವಿಷ ಸೇವಿಸಿದ ಹಿನ್ನೆಲೆಯಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವಿಷ ಹೊರತೆಗೆಯಲು ಚಿಕಿತ್ಸೆಗೆಂದು ವೈದ್ಯರು ಆಮ್ಲಜನಕ್ಕಾಗಿ ಮಹಿಳೆಯ ಬಾಯಿಗೆ ಪೈಪ್ ಹಾಕಿದ್ದಾರೆ. ಆಮ್ಲಜನಕ ಒಳ ಸೇರುತ್ತಿದ್ದಂತೆ ಬಾಯಿ ಸ್ಫೋಟಗೊಂಡಿದ್ದು, ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ.
Advertisement
Advertisement
ಈ ಪ್ರಕರಣ ಬಗ್ಗೆ ಮಾತನಾಡಿರುದ ವೈದ್ಯರೊಬ್ಬರು, ಇದೇ ಮೊದಲ ಬಾರಿ ಈ ರೀತಿಯ ಘಟನೆ ನಡೆದಿದೆ. ಬಹುಶಃ ಮಹಿಳೆ ಸಲ್ಫೂರಿಕ್ ಆ್ಯಸಿಡ್ ಒಳಗೊಂಡ ಕೆಮಿಕಲ್ ಕುಡಿದಿದ್ದಾರೆ. ಆದ್ದರಿಂದ ನಾವು ಚಿಕಿತ್ಸೆ ನೀಡುತ್ತಿದ್ದ ವೇಳೆ ಮಹಿಳೆ ಬಾಯೊಳಗೆ ಪೈಪ್ ಹಾಕಿದಾಗ, ಆಮ್ಲಜನಕ ದೇಹದೊಳಗೆ ಸೇರುತ್ತಿದ್ದಂತೆ ಸಲ್ಫೂರಿಕ್ ಆ್ಯಸಿಡ್ ಜೊತೆಗೆ ರಿಯಾಕ್ಟ್ ಆಗಿ ಬಾಯಿ ಸ್ಫೋಟಗೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ದೃಶ್ಯಾವಳಿ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವೈದ್ಯಕೀಯ ಜಗತ್ತಿನಲ್ಲಿಯೇ ಇದು ಮೊದಲ ಪ್ರಕರಣ ಎನ್ನಲಾಗಿದೆ. ಸದ್ಯ ಈ ಬಗ್ಗೆ ವೈದ್ಯರು ಸಂಶೋಧನೆ ಆರಂಭಿಸಿದ್ದಾರೆ.