ನವದೆಹಲಿ: ಡಗ್ಸ್ ವಿಚಾರಕ್ಕೆ ನಡೆದ ಗಲಾಟೆ ವೇಳೆ ಮಹಿಳೆಯನ್ನು (Woman) ಆಕೆಯ ಲಿವ್ ಇನ್ ರಿಲೇಷನ್‌ಶಿಪ್ ಗೆಳೆಯ (Live In Partner) ಕೊಲೆ ಮಾಡಿದ ಘಟನೆ ನವದೆಹಲಿಯಲ್ಲಿ (New Delhi) ನಡೆದಿದೆ.
ಮೋಹಿತ್ ಆರೋಪಿ. ವಾಯುವ್ಯ ದೆಹಲಿಯ ಬಲ್ಬೀರ್ ವಿಹಾರ್ ನಿವಾಸಿಯಾಗಿದ್ದ 28 ವರ್ಷದ ಮಹಿಳೆಯು ಚಪ್ಪಲಿ ಕಾರ್ಖಾನೆಯೊಂದರಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು. ಆಕೆ ತನ್ನ ಪತಿಯನ್ನು ತೊರೆದು 6 ವರ್ಷಗಳಿಂದ ಮೋಹಿತ್ ಎಂಬಾತನೊಂದಿಗೆ ವಾಸಿಸುತ್ತಿದ್ದಳು. ಅಷ್ಟೇ ಅಲ್ಲದೇ ಆಕೆಯ ಇಬ್ಬರು ಮಕ್ಕಳು ಇವರಿಬ್ಬರ ಜೊತೆಯಲ್ಲೇ ವಾಸಿಸುತ್ತಿದ್ದರು.
Advertisement
Advertisement
ಮೋಹಿತ್ ತನ್ನ ಸ್ನೇಹಿತರೊಂದಿಗೆ ಡ್ರಗ್ಸ್ ಸೇವಿಸುತ್ತಿರುವುದನ್ನು ಕಂಡ ಮಹಿಳೆ, ಆತನ ಜೊತೆ ಜಗಳವಾಡಿದ್ದಾಳೆ. ಈ ವೇಳೆ ಮೋಹಿತ್ ಕೋಪಗೊಂಡು ಮಹಿಳೆ ಮೇಲೆ ಟಾರ್ಪಿನ್ ಆಯಿಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಗಂಭೀರ ಗಾಯಗಳಾಗಿದ್ದ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಇಬ್ಬರು ಮಹಿಳಾ ಅಧಿಕಾರಿಗಳಿಗೆ ಸರ್ಕಾರದಿಂದ ಖಡಕ್ ಸೂಚನೆ
Advertisement
Advertisement
ಘಟನೆಗೆ ಸಂಬಂಧಿಸಿದಂತೆ ಅಮನ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಮೋಹಿತನ್ನು ಬಂಧಿಸಲಾಗಿದೆ. ಫೆ. 11ರಂದು ಸುಟ್ಟ ಗಾಯಗಳೊಂದಿಗೆ ಮಹಿಳೆ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಲಾಯಿತು. ಆದರೆ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡುವ ಸ್ಥಿತಿಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮರಾಠಾ ಮತಗಳ ಓಲೈಕೆಯಲ್ಲಿ ಕನ್ನಡ ಮಹನೀಯರ ಮರೆತರಾ ಬೆಳಗಾವಿ ರಾಜಕಾರಣಿಗಳು?
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k