– ಶ್ವಾನವನ್ನು ಸೆರೆ ಹಿಡಿದ ಗ್ರಾಮಸ್ಥರು
– ನಾಯಿ ತಂದು ಬಿಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹ
ದಾವಣಗೆರೆ: ರಾಟ್ ವೀಲರ್ (Rottweiler) ನಾಯಿ ದಾಳಿಗೆ ಮಹಿಳೆ ಬಲಿಯಾದ ಘಟನೆ ದಾವಣಗೆರೆ (Davanagere) ಹೊರ ವಲಯದ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ನಾಯಿ ದಾಳಿಯಿಂದ (Rottweiler Attack) ಸಾವನ್ನಪಿದ ಮಹಿಳೆಯನ್ನು ಅನಿತಾ (38) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಕಾರಿನಲ್ಲಿ ಬಂದ ಅಪರಿಚಿತರು 2 ರಾಟ್ ವೀಲರ್ ಜಾತಿಯ ನಾಯಿಗಳನ್ನು ಹೊನ್ನೂರು ಗೊಲ್ಲರಹಟ್ಟಿಯ ಬಳಿ ಬಿಟ್ಟು ಹೋಗಿದ್ದಾರೆ. ಅದೇ ಸಮಯದಲ್ಲಿ ಮನೆಯಿಂದ ಹೊರ ಬಂದ ಮಹಿಳೆ ಮೇಲೆ ಶ್ವಾನಗಳು ದಾಳಿ ನಡೆಸಿವೆ. ಇದನ್ನೂ ಓದಿ: ಅತ್ತೆ ಮಗಳ ಕತ್ತು ಸೀಳಿ ಕೊಂದು ಎಸ್ಕೇಪ್ ಆಗಿದ್ದ ಹಂತಕ ಅಂದರ್
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಶಿರಾ ತಾಲೂಕು ಅಸ್ಪತ್ರೆಯ ಶವಗಾರದಲ್ಲಿ ಮಹಿಳೆಯ ಮೃತದೇಹವನ್ನು ಶವಪರಿಕ್ಷೆ ನಡೆಸಲಾಗಿದೆ. ಮಹಿಳೆಗೆ ಸುಮಾರು 50 ಕಡೆಗಳಲ್ಲಿ ನಾಯಿ ಕಚ್ಚಿದೆ ಎಂದು ತಿಳಿದು ಬಂದಿದೆ.
ನಾಯಿಗಳು ಗ್ರಾಮದ ಜಮೀನಿನಲ್ಲೇ ಬೀಡು ಬಿಟ್ಟಿದ್ದವು. ಅವುಗಳನ್ನು ಹಿಡಿದು ಅವುಗಳ ಕಾಲಿಗೆ ಹಗ್ಗ ಬಿಗಿದು ಕೋಲಿಗೆ ಕಟ್ಟಿಕೊಂಡು ಗ್ರಾಮಸ್ಥರು ಎಳೆದುಕೊಂಡು ಹೋಗಿದ್ದಾರೆ. ನಾಯಿಗಳನ್ನು ತಂದು ಬಿಟ್ಟ ನಾಯಿ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೈಕ್‌ಗೆ ಬಸ್ ಡಿಕ್ಕಿ – ಯುವತಿ ಸ್ಥಳದಲ್ಲೇ ಸಾವು

