ತುಮಕೂರು| ಮಳೆಗೆ ಮನೆಗೋಡೆ ಕುಸಿದು ಬಿದ್ದು ಮಹಿಳೆ ಸಾವು

Public TV
1 Min Read
Tumakuru Wall Collapse

ತುಮಕೂರು: ನಿರಂತರ ಮಳೆಯಿಂದಾಗಿ (Rain) ಮನೆ ಗೋಡೆ (Wall) ಕುಸಿದು ಬಿದ್ದು ಮಣ್ಣಿನಡಿ ಸಿಲುಕಿ ಮಹಿಳೆಯೊಬ್ಬರು ಮೃತ ಪಟ್ಟ ದಾರುಣ ಘಟನೆ ತುಮಕೂರು (Tumakuru) ಜಿಲ್ಲೆ ಗುಬ್ಬಿ (Gubbi) ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜಿ. ಹೊಸಹಳ್ಳಿ ನಿವಾಸಿ ಸಹನಾ (27) ಮೃತ ದುರ್ದೈವಿ. ಬೆಳಗ್ಗೆ ಸ್ನಾನಕ್ಕೆ ಹಳೆಯ ಮನೆಗೆ ತೆರಳಿದ್ದ ವೇಳೆ ಗೋಡೆ ಕುಸಿದು ಸಹನಾ ಮಣ್ಣಿನಡಿ ಸಿಲುಕಿದ್ದರು. ಮಣ್ಣಿನಡಿ ಸಿಲುಕಿದ್ದ ಸಹನಾಳನ್ನ ಗ್ರಾಮಸ್ಥರು ರಕ್ಷಣೆ ಮಾಡಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದನ್ನೂ ಓದಿ: ಯೋಗೇಶ್ವರ್ ನಮ್ಮನ್ನು ಬಿಡುವುದಿಲ್ಲ ಎನ್ನುವ ವಿಶ್ವಾಸವಿತ್ತು: ಕೋಟ ಶ್ರೀನಿವಾಸ ಪೂಜಾರಿ ಬೇಸರ

ಸಹನಾಳನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪರಿಸರ ಸಂರಕ್ಷಣಾ ಕಾಯ್ದೆ ಹಲ್ಲಿಲ್ಲದ ಹಾವು, ಇದು ರಾಜಕೀಯವಲ್ಲದೆ ಮತ್ತೇನು ಅಲ್ಲ: ಸುಪ್ರೀಂ ತರಾಟೆ

Share This Article